ಸಿಬಿಐ ತನ್ನ ದಾಳಿಯಲ್ಲಿ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳನ್ನೂ ವಶಪಡಿಕೊಂಡಿದೆ: ಕಾರ್ತಿ ಚಿದಂಬರಂ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಚೀನೀಯರಿಗೆ ಅಕ್ರಮ ವೀಸಾಗಾಗಿ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐದಾಳಿಗೆ ತುತ್ತಾಗಿರುವ ಕಾರ್ತಿಚಿದಂಬರಂ ಅವರು ತಮ್ಮ ಮನೆಯ ಮೇಲೆ ನಡೆದ ದಾಳಿಯಲ್ಲಿ ಸಿಬಿಐಅಧಿಕಾರಿಗಳು ಸಂಸತ್ತಿನ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಕೆಲವು ಗೌಪ್ಯ ಮತ್ತು ಸೂಕ್ಷ್ಮ ದಾಖಲೆಗಳನ್ನು ವಸಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಲೋಕಸಭಾ ಸ್ಪೀಕರ್‌ ಗೆ ಪತ್ರಬರೆದಿರುವ ಅವರು “ಸಿಬಿಐ ದಾಳಿಯ ಸಂದರ್ಭದಲ್ಲಿ ಕರಲವು ಅಧಿಕಾರಿಗಳು ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಮಂಡಳಿಗೆ ಸಂಬಂಧಿಸಿದ ಕೆಲವು ಅತ್ಯಂತ ಗೌಪ್ಯ ಮತ್ತು ಸೂಕ್ಷ್ಮ ವೈಕ್ತಿಕ ಟಿಪ್ಪಣಿಗಳನ್ನು ಹಾಗೂ ಕೆಲವು ಕಾಗದಗಳನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ಅವರು ಕೇಳಲು ಉದ್ದೇಶಿಸಿರುವ ತಮ್ಮ ಕರಡು ಟಿಪ್ಪಣಿಗಳು ಮತ್ತು ಪ್ರಶ್ನೆಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ, ಸಾಕ್ಷಿಗಳು ಸಮಿತಿಗೆ ಸಲ್ಲಿಸಿದ ಠೇವಣಿಗಳಿಗೆ ಸಂಬಂಧಿಸಿದ ಅವರ ಕೈಬರಹದ ಟಿಪ್ಪಣಿಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಕಾರ್ತಿ ಚಿದಂಬರಂ ಆರೋಪಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!