Monday, March 4, 2024

ಬಾಗಲಕೋಟೆಯಲ್ಲಿ ಅಕ್ರಮ‌ ಚಟುವಟಿಕೆ ತಡೆಯಲು ದಿಟ್ಟ ಕ್ರಮ : ಎಸ್ಪಿ ಅಮರನಾಥ ರೆಡ್ಡಿ

ಹೊಸದಿಗಂತ ವರದಿ ಬಾಗಲಕೋಟೆ :

ಜಿಲ್ಲೆಯಲ್ಲಿ ಶೇ. 90 ರಷ್ಟು ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿದ್ದೇವೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಅಕ್ರಮ‌ ಚಟುವಟಿಕೆ ನಡೆಯದಂತೆ ಪೊಲೀಸ್ ಇಲಾಖೆ‌ ದಿಟ್ಟ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿಯವರು ಖಡಕ್ ಆಗಿ ಹೇಳಿದರು.

ನವನಗರದ ಪತ್ರಿಕಾ ಭವನದಲ್ಲಿ ಕಾನಿಪದಿಂದ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಧ್ಯ ಆದಷ್ಟು ಅಕ್ರಮ ಚಟುವಟಿಕೆ ತಡೆಯುತ್ತಿದ್ದೇವೆ. ಎಲ್ಲೆಲ್ಲಿ ಕದ್ದುಮುಚ್ಚಿ ಕ್ಲಬ್ ನಡೆಸುವವರ ಮೇಲೆಯೂ ಕ್ರಮ ಆಗುತ್ತಿದೆ ಎಂದು ಹೇಳಿದರು.

ಡ್ರಗ್ ‌ಕಂಟ್ರೋಲ್ ಮಾಡಲು ಅಭಿಯಾನ ಮಾಡಿದ್ದೇವೆ. ಸಿಂಥೆಟಿಕ್ ಡ್ರಗ್ ಕಡಿಮೆ., ಗಾಂಜಾ ಸೇದುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ 17 ಪ್ರಕರಣ ದಾಖಲು ಮಾಡಲಾಗಿದೆ, ಶೀಘ್ರ ಶಿಕ್ಷೆಯಾಗಲಿದೆ ಡ್ರಗ್ ಮುಕ್ತ ಜಿಲ್ಲೆ ಮಾಡುವ ಗುರಿ ಇದೆ ಎಂದರು.

ಹೆಲ್ಮೆಟ್ ಹಾಕಲು ಅಭಿಯಾನ ಆರಂಭವಾಗಿದೆ ಹೆಲ್ಮೆಟ್ ಹಾಕದಿದ್ದರೆ ದಂಡ ಹಾಕುತ್ತೇವೆ. ಲೌಡ್ ಸ್ಪೀಕರ್ ಹಾಕುವುದು 2000 ಸೀಜ್ ಮಾಡಿವಿ ಲೌಡ್ ಸ್ಪೀಕರ್ ಹಾಕುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ.ಜ.10 ರವರೆಗೆ ನಾಗರಿಕ ಬಂದೂಕ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ನೀ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ಸಾಮಾಜಿಕ ಜಾಲತಾಣದಲ್ಕಿ ಅನ್ಯಧರ್ಮ,‌ಅನ್ಯ ಲಿಂಗಕ್ಕೆ ,‌ಕೋಮುವಾದ ಸೃಷ್ಟಿ ಮಾಡುವ ಪೋಸ್ಟ್ ಪ್ರಕರಣ ಕ್ಕೆ ಸಂಬಂಧಿಸಿದ ದಂತೆ 20 ಪ್ರಕರಣ ದಾಖಲು ಮಾಡಲಾಗಿದೆ. ಸಾಮಾಜಿಕ ಘಾತುಕ ಶಕ್ತಿಗಳ ಮೇಲೆ ಪೊಲೀಸ್ ಇಲಾಖೆ ಕಣ್ಣು ಇಟ್ಟಿದೆ ಅವರ ಮೇಲೆ ಸದಾ ನಿಗಾ ಇಡಲು ಇಲಾಖೆ ಕ್ರಮ ಕೈಗೊಂಡಿದೆ .ಪೊಲೀಸ್ ಇಲಾಖೆ ಸಿಬ್ಬಮದ ಕೂಡ ತಂಡವಾಗಿ ಕೆಲಸ ಮಾಡುತ್ತಿದೆ ಎಂದರು.

ಗ್ರಾಮೀಣ, ನಗರ ನಾದರೂ ತಮ್ಮ ಸುತ್ತಮುತ್ತ ಘಟನೆ ನಡೆದರೆ ತಕ್ಣಣ 112ಕ್ಕೆ ಕರೆ ಮಾಡಿದರೆ ಹತ್ತ ರಿಂದ 20 ನಿಮಿಷದಲ್ಲಿ ಇಲಾಖೆ ಅವರು ಹಾಜರಿದ್ದು ಕ್ರಮವಹಿಸುತ್ತೇವೆ ಎಂದರು. ಬಾಗಲಕೋಟ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಧಲಂಭಜನ್ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!