CINE | ಬೋಲ್ಡ್‌ ಬ್ಯೂಟಿ ಸಿಲ್ಕ್‌ ಸ್ಮಿತಾ ಬಯೋಪಿಕ್‌ ಅನೌನ್ಸ್‌, ಪಾತ್ರ ಮಾಡ್ತಿರೋದು ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸೌತ್‌ ನ ಖ್ಯಾತ ನಟಿ, ಐಟಂ ಡಾನ್ಸರ್‌ ಸಿಲ್ಕ್‌ ಸ್ಮಿತಾ ಇಂದು (ಡಿ.2) ಬರ್ತ್‌ಡೇ ಹಿನ್ನೆಲೆಯಲ್ಲಿ ಎಸ್‌ಟಿಆರ್‌ಐ ಸಿನಿಮಾಸ್ ಸಂಸ್ಥೆ ಕಡೆಯಿಂದ ಹೊಸ ಚಿತ್ರದ ಘೋಷಣೆ ಆಗಿದೆ. ‘ಸಿಲ್ಕ್‌ ಸ್ಮಿತಾ- ಕ್ವೀನ್‌ ಆಫ್‌ ದಿ ಸೌತ್‌’ ಎಂಬ ಶೀರ್ಷಿಕೆಯ ಸಿನಿಮಾ ಅನೌನ್ಸ್‌ ಮಾಡಿದ್ದಾರೆ.

ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್‌ ಸ್ಮಿತಾ ಅವರ ಪಾತ್ರವನ್ನು ತೆರೆಮೇಲೆ ತರುವವರು ಯಾರು ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಚಂದ್ರಿಕಾ ರವಿ ತೆರೆಮೇಲೆ ಸ್ಮಿತಾ ಆಗಿ ಜೀವತುಂಬಲಿದ್ದಾರೆ.

𝗖𝗵𝗮𝗻𝗱𝗿𝗶𝗸𝗮 𝗥𝗮𝘃𝗶 (@chandrikaravi_) / X

ಈ ಸಿನಿಮಾವನ್ನು ಜಯರಾಮ್‌ ಸಂಕರನ್‌ ನಿರ್ದೇಶನ ಮಾಡಲಿದ್ದು, ಎಸ್‌.ಬಿ ವಿಜಯ್‌ ಅಮೃತ್‌ರಾಜ್‌ ನಿರ್ಮಾಣ ಮಾಡಲಿದ್ದಾರೆ. 2025ರ ಆರಂಭದಲ್ಲಿ ಈ ಸಿನಿಮಾ ಸೆಟ್ಟೇರಲಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!