ನಟಿ ಶೋಭಿತಾ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ಲೆಟರ್‌ ಪತ್ತೆ, ಏನಿದೆ ಅದರಲ್ಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕನ್ನಡದ ನಟಿ ಶೋಭಿತಾ ಶಿವಣ್ಣ ಅವರು ಇತ್ತೀಚೆಗೆ ಹೈದರಾಬಾದ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವು ಅನೇಕರಿಗೆ ಶಾಕಿಂಗ್ ಎನಿಸಿದೆ. ಮದುವೆ ಆಗಿ ಇನ್ನೂ ಎರಡು ವರ್ಷ ತುಂಬಿತ್ತಷ್ಟೇ. ಆಗಲೇ ಜೀವನ ಕೊನೆ ಮಾಡಿಕೊಳ್ಳುವ ನಿರ್ಧಾರಕ್ಕೆ ಅವರು ಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್​ನ ಗಚ್ಚಿಬೌಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಪೊಲೀಸರಿಗೆ ಆತ್ಮಹತ್ಯೆ ಪತ್ರ ಸಿಕ್ಕಿದೆ. ಇದರಲ್ಲಿ ಒಂದು ವಿಚಾರ ಹೈಲೈಟ್ ಆಗಿದೆ.

ಶೋಭಿತಾಗೆ ಕನ್ನಡ ಚಿತ್ರರಂಗದ ಜೊತೆ ನಂಟು ಇತ್ತು. ‘ಎರಡೊಂದ್ಲಾ ಮೂರು’, ‘ಒಂದ್‌ ಕಥೆ ಹೇಳಾ’ ಸಿನಿಮಾಗಳಲ್ಲಿ ಶೋಭಿತಾ ನಟಿಸಿದ್ದರು. ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಮದುವೆಯಾದ ಶೋಭಿತಾ ಅವರು ಹೈದರಾಬಾದ್‌ನಲ್ಲಿ ವಾಸವಾಗಿದ್ದರು. ಅಲ್ಲಿಯೇ ಅವರು ನಿಧನ ಹೊಂದಿದ್ದಾರೆ.

ಪೊಲೀಸರಿಗೆ ಶೋಭಿತಾ ಸೂಸೈಡ್​ ಲೇಟರ್ ಸಿಕ್ಕಿದೆ. ‘ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು’ ಎಂದು ಬರೆಯಲಾಗಿದೆ. ‘ಜೀವನದಲ್ಲಿ ಎಲ್ಲವೂ ಪೆರ್ಫೆಕ್ಟ್ ಆಗಿದೆ’ ಎಂದು ಬರೆಯಲಾಗಿದೆ. ಇದರ ಅರ್ಥಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೆರೆ ಹೊರೆಯವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ‘ಶೋಭಿತಾ ಸಾವಿಗೆ ಖಿನ್ನತೆ ಕಾರಣವೇ? ಪತಿಯೊಂದಿಗೆ ಭಿನ್ನಾಭಿಪ್ರಾಯ ಇತ್ತೇ’ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!