ಹೊಸದಿಗಂತ ಡಿಜಿಟಲ್ ಡೆಸ್ಕ್
ಕೊರೋನಾ ಬಳಿಕ ದೇಶದಲ್ಲಿ ಅತೀ ಹೆಚ್ಚು ಸದ್ದು ಮಾಡುತ್ತಿರುವ ಒಟಿಟಿ ಪ್ಲಾಟ್ಫಾರ್ಮ್ ಜಾರಿಗೆ ಹತ್ತಿರವಾಗುತ್ತಿದೆ. ಈ ಕಾರಣಡಿಡಿಎಂದ ಇಂದು ಎಲ್ಲೆಡೆ ದೊಡ್ಡ ಮಟ್ಟದ ಕಾಂಪಿಟೇಷನ್ ನಡೆಯುತ್ತಿದೆ. ಹಲವು ದಿಗ್ಗಜ ಕಂಪನಿಗಳು ಒಟಿಟಿ ಪ್ಲಾಟ್ಫಾರ್ಮ್ ಪರಿಚಯಿಸುತ್ತಿದ್ದಾರೆ.
ಈ ರೀತಿ ಬಂದ ಒಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ ನೆಟ್ಫ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್ಸ್ಟಾರ್ ಅತೀ ಪ್ರಮುಖವಾಗಿದ್ದು, ಹಾಗು ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದೆ.
ಇದೀಗ ಈ ಲಿಸ್ಟ್ ಗೆ ಮತ್ತೊಂದು ಸೇರಲಿದ್ದು, ಅದೇ ಬಾಲಿವುಡ್ ನಟ ಶಾರುಖ್ ಖಾನ್ ಅವರ ಎಸ್ಆರ್ಕೆ+ (SRK+) ಹೆಸರಿನ ಒಟಿಟಿ ಪ್ಲಾಟ್ಫಾರ್ಮ್.
ಹೌದು, ಶಾರುಖ್ ಖಾನ್ಬಾ ಲಿವುಡ್ನಲ್ಲಿ ಬಹುಬೇಡಿಕೆಯ ನಟ. ಅನೇಕ ದೊಡ್ಡ ದೊಡ್ಡ ಸಿನಿಮಾಗಳನ್ನು ನೀಡಿ ಅಭಿಮಾನಿಗಳ ಬಹು ಪ್ರಿಯ ನಟ. ಈಗಾಗಲೇ ನಟನೆ ಜೊತೆಗೆ ನಿರ್ಮಾಣದಲ್ಲೂ ಶಾರುಖ್ ಖಾನ್ ಬ್ಯುಸಿ ಆಗಿದ್ದಾರೆ.ಇದೀಗ ಅವರು ಒಟಿಟಿ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದು, ಎಸ್ಆರ್ಕೆ+ (SRK+) ಹೆಸರಿನ ಒಟಿಟಿ ಪ್ಲಾಟ್ಫಾರ್ಮ್ ಲಾಂಚ್ ಮಾಡೋಕೆ ಶಾರುಖ್ ರೆಡಿ ಆಗಿದ್ದಾರೆ.
ಈ ಕುರಿತು ಎಸ್ಆರ್ಕೆ+ ಲೋಗೋವನ್ನು ಶಾರುಖ್ ಖಾನ್ ಶೇರ್ ಮಾಡಿಕೊಂಡಿದ್ದಾರೆ. ‘ಒಟಿಟಿ ಜಗತ್ತಿನಲ್ಲಿ ಏನೇನೋ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ.
ಇವರ ಈ ಹೊಸ ಪ್ರಯೋಗಕ್ಕೆ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದು, ಕಮೆಂಟ್ ಬಾಕ್ಸ್ನಲ್ಲಿ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.
Kuch kuch hone wala hai, OTT ki duniya mein. pic.twitter.com/VpNmkGUUzM
— Shah Rukh Khan (@iamsrk) March 15, 2022