ಸಂಸದರ ಮಕ್ಕಳು ಟಿಕೆಟ್ ಪಡೆಯದಿರಲು ನಾನೇ ಕಾರಣ, ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸಂಸದರ ಮಕ್ಕಳು ಪಕ್ಷದ ಟಿಕೆಟ್​ ಪಡೆಯದಿರಲು ನಾನೇ ಕಾರಣ ಮತ್ತು ನಾವು ಕುಟುಂಬ ರಾಜಕಾರಣದ ವಿರುದ್ಧ ಇದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ.
ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ಇದೇ ಮೊದಲ ಬಾರಿಗೆ ಮಂಗಳವಾರ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಯಾರಿಗಾದರೂ ಟಿಕೆಟ್‌ ಕಡಿತವಾದ್ರೆ, ಅದು ನನ್ನ ಹೊಣೆ. ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಅವಕಾಶ ನೀಡುವುದಿಲ್ಲ. ವಂಶ ರಾಜಕಾರಣಕ್ಕೆ ಬೇರೆ ಪಕ್ಷಗಳಿವೆ ಎಂದರು.
ಇತ್ತೀಚಿನ ವಿಧಾನಸಭೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಜಾತಿ ರಾಜಕಾರಣವು ಕೊನೆಗಾಣುವ ಹಂತಕ್ಕೆ ಬಂದಿದೆ ಎಂದು ಹೇಳಿದರು ಅಂತ ಮೂಲಗಳು ತಿಳಿಸಿವೆ.
ಚುನಾವಣೆಯಲ್ಲಿ ಬಿಜೆಪಿ ಕೆಲವು ಸ್ಥಾನಗಳನ್ನ ಏಕೆ ಕಳೆದುಕೊಂಡಿತು ಅನ್ನೋದನ್ನ ನಿರ್ಣಯಿಸಲು ಪ್ರಧಾನಿ ಮೋದಿ ಎಲ್ಲಾ ಸಂಸದರನ್ನ ಕೇಳಿದರು. ನಿಮ್ಮ ಪ್ರದೇಶದಲ್ಲಿ ಕಳೆದುಹೋದ 100 ಬೂತ್‌ಗಳನ್ನು ನೀವು ಮೌಲ್ಯಮಾಪನ ಮಾಡಿ ಮತ್ತು ನಾವು ಏಕೆ ಸೋತಿದ್ದೇವೆ ಎಂಬ ವರದಿಯನ್ನ ಸಿದ್ಧಪಡಿಸಿ, ಆ ಸೋಲಿಗೆ ಕಾರಣಗಳನ್ನು ಕಂಡುಹಿಡಿದು, ಸರಿಪಡಿಸಬಹುದು ಎಂದು ಪ್ರಧಾನಿ ಮೋದಿ ಸಂಸದರಿಗೆ ಹೇಳಿದರು.
ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಜನರನ್ನು ಸಮಾಧಾನ ಪಡಿಸುವ ಬದಲು ವಿರೋಧ ಪಕ್ಷಗಳು ಉಕ್ರೇನ್​ನಿಂದ ಮೊದಲ ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು ಎಂದು ಪ್ರಧಾನಿ ಕಿಡಿಕಾರಿದರು. ಅಲ್ಲದೇ, ಉಕ್ರೇನ್​ನಲ್ಲಿ ಸಿಲುಕಿದ್ದ ಭಾರತೀಯರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದು, ಬಿಜೆಪಿ ಮಾತ್ರ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಸಂಬಂಧಿಸಿದಂತೆ, ಕಾಶ್ಮೀರದ ಸತ್ಯವನ್ನ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!