ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಆರೋಗ್ಯದಲ್ಲಿ ಏರುಪೇರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ಹಿರಿಯ ನಟ, ನಟಿ ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಅವರನ್ನು ನಿನ್ನೆ ದಾಖಲಿಸಲಾಗಿದ್ದು, ವಿಳಂಬವಾಗಿ ವಿಷಯ ಹೊರಕ್ಕೆ ಬಂದಿದೆ.

ನಟ ಇತ್ತೀಚೆಗೆ ಚುನಾವಣಾ ಪ್ರಚಾರ ಮತ್ತು ಮಗಳು ಸೋನಾಕ್ಷಿ ಸಿನ್ಹಾ ಮದುವೆಗೆ ತುಂಬಾ ಓಡಾಟ ಮಾಡಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಮಗಳು ಸೋನಾಕ್ಷಿಯ ಗುಟ್ಟಾಗಿ ಮದ್ವೆಯಾಗಿದ್ದರ ಬಗ್ಗೆ ತೀವ್ರವಾಗಿ ನಟ ತಲೆಕೆಡಿಸಿಕೊಂಡಿದ್ದರು ಎನ್ನಲಾಗುತ್ತಿದೆ.

ಶತ್ರುಘ್ನ ಸಿನ್ಹಾ ಅವರು ಎಷ್ಟು ಬೇಗ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲದಿದ್ದರೂ, ಅವರ ಆರೋಗ್ಯ ಸ್ಥಿರವಾಗಿದೆ ಎಂದಷ್ಟೇ ಮಾಹಿತಿ ಹೊರಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಸಮಯ ಸಾಧಕ ! ಅನುಕೂಲ ಶಾಸ್ತ್ರದ ಪರಿಪಾಲಕ !
    ಸಿದ್ಧಾತಗಳಿಲ್ಲದ ಪಕ್ಕಾ ರಾಜಕಾರಣಿ ! ಪರವಾಗಿಲ್ಲ.

LEAVE A REPLY

Please enter your comment!
Please enter your name here

error: Content is protected !!