ಬಾಲಿವುಡ್ ನಟಿ ಬಿಪಾಶಾ ಬಸು ಮನೆಗೆ ಬಂದ ಮಹಾಲಕ್ಷ್ಮೀ: ಸಂಭ್ರಮದಲ್ಲಿ ಕರಣ್ ದಂಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಬಿಪಾಶಾ ಬಸು ಹಾಗೂ ಪತಿ ಕರಣ್​ ಸಿಂಗ್ ಗ್ರೋವರ್ ಮನೆಯಲ್ಲಿ ಸಂಭ್ರಮ. ಇಂದು ಮನೆಗೆ ಮಹಾಲಕ್ಷ್ಮೀಯ ಆಗಮನವಾಗಿದೆ.

ಬಿಪಾಶಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ದಂಪತಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

2016ರಲ್ಲಿ ಕರಣ್​ ಸಿಂಗ್​ ಗ್ರೋವರ್​ ಜೊತೆ ಬಿಪಾಶಾ ಬಸು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವಿವಾಹ ನಡೆದ ಆರು ವರ್ಷಗಳ ಬಳಿಕ ಈ ದಂಪತಿ ಹೊಸ ಸದಸ್ಯೆಯನ್ನು ಸ್ವಾಗತಿಸಿದ್ದಾರೆ.

2022ರ ಆಗಸ್ಟ್​ನಲ್ಲಿ ಬಿಪಾಶಾ ಬಸು ತಾವು ಪ್ರೆಗ್ನೆಂಟ್​ ಎಂಬ ಸುದ್ದಿಯನ್ನು ಹಂಚಿಕೊಂಡರು. ಅಲ್ಲಿಂದ ಈಚೆಗೆ ಹಲವು ಬಗೆಯಲ್ಲಿ ಅವರು ಬೇಬಿಬಂಪ್ ಫೋಟೋಶೂಟ್​ ಮಾಡಿಸುತ್ತಾ ಬಂದಿದ್ದಾರೆ. ಈಗ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

2015ರಲ್ಲಿ ರಿಲೀಸ್ ಆದ ‘ಅಲೋನ್’ ಅವರ ಕೊನೆಯ ಸಿನಿಮಾ. ಈಚೆಗೆ ಬಿಪಾಶಾ ಬಸು ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಂಸಾರದ ಕಡೆಗೆ ಅವರು ಗಮನ ಹರಿಸಿದ್ದಾರೆ. ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ಕೌಟುಂಬಿಕ ವಿಚಾರದ ಬಗ್ಗೆ ಬಿಪಾಶಾ ಆಗಾಗ ಅಪ್​ಡೇಟ್ ನೀಡುತ್ತಲೇ ಇರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!