ಮೊಣಕಾಲಿನಿಂದ ತಿರುಪತಿ ತಿಮ್ಮಪ್ಪನ ಮೆಟ್ಟಿಲೇರಿದ ಬಾಲಿವುಡ್ ನಟಿ ಜಾಹ್ನವಿ ಕಪೂರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರವಾಗಿರುವ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಬಾಲಿವುಡ್ ನಟಿ ಜಾಹ್ನಾವಿ ಕಪೂರ್, ಆಕೆಯ ಬಾಯ್‌ಫ್ರೆಂಡ್ ಹಾಗೂ ಒರಿ ಮೊಣಕಾಲಿನ ಮೂಲಕ ಮೆಟ್ಟಿಲಗಳನ್ನು ಹತ್ತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇತ್ತೀಚೆಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್, ತಮ್ಮ ಬಾಯ್‌ಫ್ರೆಂಡ್ ಹಾಗೂ ಒರಿ ಜೊತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮೂವರು ಬಾಲಾಜಿ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಈ ಭೇಟಿಯ ವಿಡಿಯೋವನ್ನು ಒರಿ ಪೋಸ್ಟ್ ಮಾಡಿದ್ದಾರೆ.

ಜಾಹ್ನವಿ ಕಪೂರ್ , ತಮ್ಮ ಬಾಯ್‌ಫ್ರೆಂಡ್ ಎಂದೇ ಗುರುತಿಸಿಕೊಂಡಿರುವ ಶಿಖರ್ ಪಹಾರಿಯಾ ಹಾಗೂ ಒರಿ ಜೊತೆಯಾಗಿ ಮಾರ್ಚ್ 6 ರಂದು ತಿರುಪತಿ ದೇವಸ್ಥಾನಕ್ಕೆ ಬೇಟಿ ನೀಡಿದ್ದರು. ಜಾಹ್ನವಿ ತಾಯಿ, ನಟಿ ಶ್ರೀದೇವಿ ತಿರುಪತಿ ಬಾಲಾಜಿಯ ಭಕ್ತರಾಗಿದ್ದರು. ದಕ್ಷಿಣ ಭಾರತದ ನಟಿ ಶ್ರೀದೇವಿ ಅತೀ ಹೆಚ್ಚು ಬಾರಿ ತಿರುಪತಿ ಬಾಲಾಜಿ ದರ್ಶನ ಪಡೆದಿದ್ದಾರೆ.

ದೇವಸ್ಥಾನಕ್ಕೆ ಬೇಟಿ ನೀಡಿದ ಈ ವಿಡಿಯೋವನ್ನು ಒರಿ ಹಂಚಿಕೊಂಡಿದ್ದಾರೆ. ಸತತ 3 ಗಂಟೆಗಳ ಕಾಲ ಮೆಟ್ಟಿಲುಗಳನ್ನು ಹತ್ತಿ ಮೂವರು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ಜಾಹ್ನವಿ ಮೊಣಕಾಲಿನಲ್ಲಿ ಸರಾಗವಾಗಿ ಮೆಟ್ಟಿಲು ಹತ್ತಿದರೆ, ಒರಿ ಹಾಗೂ ಶಿಖರ್ ಪ್ರಯಾಸದಿಂದ ಮೆಟ್ಟಿಲು ಹತ್ತಿದ್ದಾರೆ. ಮೊಣಕಾಲಿನಲ್ಲೇ ಮೆಟ್ಟಿಲು ಹತ್ತಿ ದೇವರ ದರುಶನ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!