Wednesday, February 8, 2023

Latest Posts

ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ ಬಾಲಿವುಡ್ ನಟಿ ಜಾನ್ವಿ ಕಪೂರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

`ಕಾಂತಾರ’ ಇಡೀ ವಿಶ್ವದಲ್ಲಿ ಅಬ್ಬರಿಸಿದ ಸಿನಿಮಾ ಕೇವಲ ಸಾಮಾನ್ಯ ಜನರು ಅಲ್ಲದೇ ನಾನಾ ಸಿನಿ ತಾರೆಯರು ಕೂಡ ಸಿನಿಮಾಕ್ಕೆ ಫಿದಾ ಆಗಿದ್ದಾರೆ.
ಇದೀಗ ಈ ಸಾಲಿನಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್. ತನಗೂರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇಅನೇಕ ಸ್ಟಾರ್ ನಟ-ನಟಿಯರು ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ನಟಿ ಜಾನ್ವಿ ಕಪೂರ್ ರಿಷಬ್ ಜೊತೆ ಸಿನಿಮಾ ಮಾಡುವ ಬಗ್ಗೆ ಆಸೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಜಾನ್ವಿ ರಿಷಬ್ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಶೆಟ್ಟಿಯನ್ನು ಹಾಡಿಹೊಗಳಿರುವ ಜಾನ್ವಿ ಕಪೂರ್ ಅವರ ಜೊತೆ ಸಿನಿಮಾ ಮಾಡಬೇಕು ಎಂದಿದ್ದಾರೆ. ರಿಷಬ್ ಶೆಟ್ಟಿಯನ್ನು ತುಂಬಾ ಇಷ್ಟಪಡುತ್ತೇನೆ. `ಕಾಂತಾರ’ ಕೊನೆಯ 30 ನಿಮಿಷಗಳು ಅವರು ಏನು ಮಾಡಿದ್ದಾರೆ ಎಂಬುದು ಸಿನಿಮಾನೇ ತೋರಿಸಿ ಕೊಟ್ಟಿದೆ. ಕಾಂತಾರ ತುಂಬಾ ವಿಭಿನ್ನವಾಗಿದೆ. ಆ ಸ್ಥಳ, ಸಮುದಾಯ, ಧಾರ್ಮಿಕ ಪದ್ಧತಿ, ಪ್ರತಿಯೊಬ್ಬರೂ ರಿಲೇಟ್ ಆಗಲು ಸಾಧ್ಯವಾಯಿತು. ಏಕೆಂದರೆ ತಮ್ಮ ಪರಿಸರವನ್ನು ಪ್ರಾಮಾಣಿಕವಾಗಿ ಮತ್ತು ನಿಖರವಾಗಿ ಚಿತ್ರಸಿದ್ದಾರೆ ಎಂದು ಹೇಳಿದ್ದಾರೆ.

ರಿಷಬ್ ಮಾತ್ರವಲ್ಲದೇ ಜಾನ್ವಿ ಸೌತ್ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಸೌತ್ ಕನೆಕ್ಷನ್ ಹೊಂದಿರುವ ನಟಿ ಜಾನ್ವಿ ಹೆಚ್ಚಾಗಿ ಹೈದರಾಬಾದ್‌ನಲ್ಲಿ ಇರುತ್ತಾರೆ. ದಕ್ಷಿಣ ಭಾರತದ ಸಿನಿಮಾಗಳನ್ನು ಹೆಚ್ಚಾಗಿ ನೋಡುವುದಾಗಿ ಹೇಳಿದ ಜಾನ್ವಿ ತೆಲುಗು ಸ್ಟಾರ್‌ಗಳ ಬಗ್ಗೆಯೂ ಮಾತನಾಡಿದ್ದಾರೆ. ನಟ ಅಲ್ಲು ಅರ್ಜುನ್, ಜ್ಯೂ.ಎನ್‌ಟಿಆರ್ ಜೊತೆ ನಟಿಸಬೇಕೆಂದು ಹೇಳಿದ್ದಾರೆ. ಈ ವೇಳೆ ನಟ ರಿಷಬ್ ಶೆಟ್ಟಿ ಜೊತೆಯೂ ಕೆಲಸ ಮಾಡಬೇಕೆಂದು ಜಾನ್ವಿ ಕಪೂರ್ ಬಹಿರಂಗ ಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!