ಬಾಂಗ್ಲಾ ಗಡಿಯಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ಬಿಎಸ್​ಎಫ್​ ನಾಯಿ: ತನಿಖೆಗೆ ಆದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ಗಡಿಭಾಗದಲ್ಲಿ ಸ್ನಿಫರ್​ ನಾಯಿ ಮೂರು ಮರಿಗಳಿಗೆ ಜನ್ಮ ನೀಡಿದೆ.ಇದೀಗ ಕುರಿತು ತನಿಖೆಗಾಗಿ ಕೋರ್ಟ್​ ಕಮಿಟಿ ಕೂಡ ರಚಿಸಲಾಗಿದೆ.

ಹೌದು, ಮೇಘಾಲಯದ ಶಿಲ್ಲಾಂಗ್ ಪ್ರದೇಶದ ಬಾಂಗ್ಲಾದೇಶ ಗಡಿಯಲ್ಲಿರುವ ಬಾರ್ಡರ್ ಔಟ್‌ಪೋಸ್ಟ್‌ನಲ್ಲಿ ನಿಯೋಜಿಸಲಾಗಿದ್ದ ಬಿಎಸ್‌ಎಫ್ ಸ್ನಿಫರ್ ನಾಯಿ ಮೂರು ಮರಿಗಳಿಗೆ ಜನ್ಮ ನೀಡಿತು. ಆದ್ರೆ ನಿಯಮಗಳ ಪ್ರಕಾರ ಇಂತಹ ಘಟನೆ ನಡೆಯಬಾರದು.ಹೀಗಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಆದೇಶಿಸಿದೆ.

ನಿಯಮಗಳ ಪ್ರಕಾರ, ಬಿಎಸ್​ಎಫ್​ ನಾಯಿ ಹೈ-ಸೆಕ್ಯುರಿಟಿ ವಲಯದಲ್ಲಿ ಅದರ ನಿರ್ವಾಹಕರ ನಿರಂತರ ಜಾಗರೂಕತೆ ಮತ್ತು ರಕ್ಷಣೆಯಲ್ಲಿ ಗರ್ಭಿಣಿಯಾಗಬಾರದು.ದಳದ ಪಶುವೈದ್ಯ ವಿಭಾಗದ ಸಲಹೆ ಮತ್ತು ಮೇಲ್ವಿಚಾರಣೆಯಲ್ಲಿ ಮಾತ್ರ ನಾಯಿಗಳಿಗೆ ಸಂತಾನೋತ್ಪತ್ತಿ ಮಾಡಲು ಅನುಮತಿಸಲಾಗಿದೆ ಎಂದು ನಿಯಮಗಳು ಹೇಳುತ್ತವೆ.

ಹೀಗಾಗಿ ಇದೀಗ ಬಿಎಸ್​ಫ್​ನ 170 ಬೆಟಾಲಿಯನ್, ಧನಕಗಿರಿ, ಮೇಘಾಲಯದ ಕಚೇರಿ, ಡಿಸೆಂಬರ್ 23 ರ ತನ್ನ ಪತ್ರದ ಮೂಲಕ, ಉಪ ಕಮಾಂಡೆಂಟ್‌ನಿಂದ ಘಟನೆಯ ವಿವರಗಳನ್ನು ವಿಚಾರಣೆಗಾಗಿ ಕೇಳಿದೆ.

ಡಿಸೆಂಬರ್ 5, 2022 ರಂದು ಬೆಳಿಗ್ಗೆ 10 ಗಂಟೆಗೆ ಬಿಒಪಿ ಬಾಗ್ಯಾರಾದಲ್ಲಿ ನಾಯಿ ಲಾಲ್ಸಿ (ಹೆಣ್ಣು) ಮೂರು ಮರಿಗಳಿಗೆ ಜನ್ಮ ನೀಡಿದ ಸಂದರ್ಭಗಳನ್ನು ತನಿಖೆ ಮಾಡಲು ಉಪ ಕಮಾಂಡೆಂಟ್ ಅಜೀತ್ ಸಿಂಗ್ ಅವರು ವಿಶೇಷ ತನಿಖೆ ನಡೆಸಬೇಕು ಎಂದು ಆದೇಶಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!