ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಬುಧವಾರ (ಸೆಪ್ಟೆಂಬರ್ 11) ವಿಧಿವಶರಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಕರೀನಾ ಕಪೂರ್, ಸೈಫ್ ಅಲಿ ಖಾನ್, ಅರ್ಬಾಜ್ ಖಾನ್, ಅರ್ಜುನ್ ಕಪೂರ್ ಸೇರಿದಂತೆ ಅನೇಕ ಬಿಟೌನ್ ಸೆಲಿಬ್ರಿಟಿಗಳು ಮಲೈಕಾ ಅವರ ಮನೆಗೆ ತಲುಪಿದ್ದಾರೆ.
ಇದೀಗ ಸ್ಥಳಕ್ಕಾಗಮಿಸಿದ ಮುಂಬೈ ಪೊಲೀಸರು ನಟಿಯ ತಂದೆಯ ಸಾವಿನ ಬಗ್ಗೆ ಮೊದಲ ಹೇಳಿಕೆ ನೀಡಿದ್ದಾರೆ.
ಮಲೈಕಾ ಅವರ ತಂದೆ ಅನಿಲ್ ಅರೋರಾ ಅವರ ಸಾವು ಪ್ರಾಥಮಿಕವಾಗಿ ಆತ್ಮಹತ್ಯೆ ಎಂದು ತೋರುತ್ತದೆ. ಆತ್ಯಹತ್ಯೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಅನಿಲ್ ಅರೋರಾ ಕಟ್ಟಡದ ಆರನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಪ್ರತಿಯೊಂದು ಅಂಶವನ್ನು ನಿಖರವಾಗಿ ಪರಿಶೀಲಿಸುತ್ತಿದ್ದೇವೆ. ನಮ್ಮ ತಂಡದ ಜತೆಗೆ ಫೋರೆನ್ಸಿಕ್ ತಂಡ ಕೂಡ ಘಟನಾ ಸ್ಥಳದಲ್ಲಿದೆ. ತನಿಖೆ ಇನ್ನೂ ಮುಂದುವರಿದಿದೆ ಎಂದು ಡಿಸಿಪಿ ಕ್ರೈಂ ಬ್ರಾಂಚ್ ರಾಜ್ ತಿಲಕ್ ರೋಷನ್ ತಿಳಿಸಿದ್ದಾರೆ.
ಅನಿಲ್ ಅರೋರಾ ಅವರ ಸಾವಿನ ಸುದ್ದಿ ಬೆಳಗ್ಗೆ 9 ಗಂಟೆಗೆ ಬಹಿರಂಗವಾಹಿತು. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಫ್ಲಾಟ್‌ನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಭವಿಸಿದಾಗಿ ನಟಿ ಮಲೈಕಾ ಅರೋರಾ ಮುಂಬೈನಲ್ಲಿ ಇರಲಿಲ್ಲ. ವಿಷಯ ತಿಳಿದ ಬಳಿಕ ಪುಣೆಯಿಂದ ಮುಂಬೈಗೆ ಬಂದರು ಎಂದು ಎನ್ನಲಾಗಿದೆ.