ಇಸ್ರೇಲ್‌ನಲ್ಲಿ ಬಾಲಿವುಡ್ ನಟಿ ನುಶ್ರತ್ ಬರುಚಾ ಲಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಸ್ರೇಲ್-ಪ್ಯಾಲೆಸ್ಟೈನ್‌ ನಡುವಿನ ಸಂಘರ್ಷ ಹೆಚ್ಚಾಗಿದೆ. ಇದರಿಂದ ಇಸ್ರೇಲ್‌ನಲ್ಲಿ ಲಾಕ್ ಆಗಿರುವ ಬಾಲಿವುಡ್ ನಟಿ ನುಶ್ರತ್ ಬರುಚಾ (Nushrratt Bharuccha) ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಪ್ರಯತ್ನ ಶುರುವಾಗಿದೆ.

ಇಸ್ರೇಲ್- ಪ್ಯಾಲೆಸ್ಟೈನ್‌ ಮಧ್ಯೆ ಯುದ್ಧ ದಾಳಿ-ಪ್ರತಿದಾಳಿ ನಡೆಯುತ್ತಿದೆ. ಈ ಸಂಘರ್ಷದ ಮಧ್ಯೆ ಬಾಲಿವುಡ್ ನಟಿ ನುಶ್ರತ್ ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದರು.

ನುಶ್ರತ್ ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರ ತಂಡದ ಸದಸ್ಯರು ತಿಳಿಸಿದ್ದಾರೆ. ದುರಾದೃಷ್ಟವಶಾತ್ ನುಸ್ರತ್ ಇಸ್ರೇಲ್‌ನಲ್ಲಿ ಲಾಕ್‌ ಆಗಿದ್ದರು. ಅವರು ಹೈಫಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಲು ಅಲ್ಲಿಗೆ ಹೋಗಿದ್ದರು ಎಂದು ಅವರು ಮಾಹಿತಿ ನೀಡಿದ್ದರು.

ನಿನ್ನೆ ಮಧ್ಯಾಹ್ನ 12.30ರವರೆಗೆ ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವು. ಅವರು ಬೇಸ್ ಮೆಂಟ್ ಒಂದರಲ್ಲಿ ಸೇಫ್ ಆಗಿದ್ದಾರೆ. ಅವರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ನಾವು ಏನನ್ನೂ ಬಹಿರಂಗಪಡಿಸಲು ಆಗುವುದಿಲ್ಲ. ನಿನ್ನೆ ಮಧ್ಯಾಹ್ನದಿಂದ ಅವರ ಸಂಪರ್ಕ ಮಾಡಲು ನಮಗೆ ಸಾಧ್ಯವಾಗಿಲ್ಲ. ಅವರು ವಾಪಸ್ ಭಾರತಕ್ಕೆ ಮರಳಲು ಮಾಡಬೇಕಾಗಿರುವ ವ್ಯವಸ್ಥೆಗೆ ಪ್ರಯತ್ನ ಪಡುತ್ತಿದ್ದೇವೆ ಎಂದು ಅವರ ತಂಡದದ ಸದಸ್ಯರೊಬ್ಬರು ತಿಳಿಸಿದ್ದರು.

ಇದೀಗ ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ನುಶ್ರತ್ ಭರುಚ್ಚಾ ಸುರಕ್ಷಿತವಾಗಿ ಇಸ್ರೇಲ್‌ನ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!