ಹುಲಿ ಫೋಟೋ ಕ್ಲಿಕ್ಕಿಸಿ ಎಡವಟ್ಟು ಮಾಡಿಕೊಂಡ ಬಾಲಿವುಡ್ ನಟಿ ರವೀನಾ ಟಂಡನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್ ನಟಿ ರವೀನಾ ಟಂಡನ್ ಅವರಿಗೆ ಹೊಸ ಸಂಕಷ್ಟ ಎದುರಾಗಿದ್ದು, ಹುಲಿಯ ಫೋಟೋ ಕ್ಲಿಕ್ಕಿಸಿದ್ದಕ್ಕೆ ಎಡವಟ್ಟು ಮಾಡಿಕೊಂಡಿದ್ದಾರೆ.

ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ನಟಿ ರವೀನಾ ಇತ್ತೀಚಿಗಷ್ಟೆ ಸಫಾರಿಗೆ ತೆರಳಿದ್ದರು. ಸತ್ಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ರವೀನಾ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟಿ ರವೀನಾ ಹುಲಿ ಸಮೀಪ ಹೋಗಿ ವಿಡಿಯೋ ಮಾಡಿದ್ದಾರೆ, ತೊಂದರೆ ನೀಡಿದ್ದಾರೆ ಎಂದು ಮೀಸಲು ಅಧಿಕಾರಿಗಳು ತನಿಖೆ ಆದೇಶಿಸಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ವಾಹನ ಚಾಲಕ ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳು ಹಾಗೂ ರವೀನಾ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅರಣ್ಯ ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ.

ಈ ಬೆನ್ನಲ್ಲೇ ನಟಿ ರವೀನಾ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದ ಜೀಪ್‌ನಲ್ಲಿಯೇ ತಾನು ಪ್ರಯಾಣಿಸಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಇಲಾಖೆಯಿಂದ ಒದಗಿಸಲಾದ ತರಬೇತಿ ಪಡೆದ ಮಾರ್ಗದರ್ಶಿಗಳು ಮತ್ತು ಚಾಲಕರು ಸಫಾರಿಯಲ್ಲಿ ಜೊತೆಗಿದ್ದರು ಎಂದು ಹೇಳಿದ್ದಾರೆ.ರವೀನಾ ನವೆಂಬರ್ 22ರಂದು ಸತ್ಪುರ ಮೀಸಲು ಪ್ರದೇಶಕ್ಕೆ ಭೇಟಿ ನೀಡಿದ್ದರು.

ರವೀನಾ ಇದ್ದ ಸಫಾರಿ ಜೀಪ್ ಹುಲಿಯ ಸಮೀಪ ತಲುಪುತ್ತಿರುವ ವೇಳೆ ಅವರ ವರ್ತನೆಯಿಂದ ಹುಲಿಗೂ ಕಿರಿಕಿರಿ ಆಗಿದ್ದು, ಅದು ಘರ್ಜಿಸಿ ಮುಂದೆ ಸಾಗಿದೆ. ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ವಿಡಿಯೋ ವೈರಲ್ ಆದ ಬಳಿಕ ಅರಣ್ಯದ ಉಪ ವಿಭಾಗಾಧಿಕಾರಿ ಧೀರಜ್ ಸಿಂಗ್ ಚೌಹಾಣ್ ಹಿರಿಯ ಅಧಿಕಾರಿಗಳ ನಿರ್ದೇಶನದ ನಂತರ, ಈ ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!