ಪಾಕ್ ಪ್ರವಾಸದಲ್ಲಿರುವ ಇಂಗ್ಲೆಂಡ್ ಟೀಮ್‌ ಗೆ ಶಾಕ್: ಕ್ರಿಕೆಟಿಗರನ್ನು ಕಾಡಿದ ಅಪರಿಚಿತ ವೈರಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಹಳ ವರ್ಷಗಳ ಬಳಿಕ ಇಂಗ್ಲೆಂಡ್ ಕ್ರಿಕೆಟ್‌ ಟೀಮ್‌ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ನಾಳೆಯಿಂದ ರಾವಲ್ಪಿಂಡಿಯಲ್ಲಿ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಆದ್ರೆ ಪಂದ್ಯಕ್ಕೂ ಮೊದಲೇ ಇಂಗ್ಲೆಂಡ್ ತಂಡಕ್ಕೆ ಶಾಕ್ ಆಗಿದ್ದು, ತಂಡದ ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ಅನೇಕ ಕ್ರಿಕೆಟಿಗರಿಗೆ ಅಪರಿಚಿತ ವೈರಸ್‌ ಸೋಂಕು ತಗುಲಿದೆ.

ಒಟ್ಟು 14 ಸದಸ್ಯರು ಈ ಸೋಂಕಿಗೆ ತುತ್ತಾಗಿದ್ದು, ಜೋ ರೂಟ್, ಝಾಕ್ ಕ್ರಾಲಿ, ಹ್ಯಾರಿ ಬ್ರೂಕ್, ಒಲ್ಲಿ ಪೋಪ್ ಮತ್ತು ಕೀಟನ್ ಜೆನ್ನಿಂಗ್ಸ್ ಕೂಡ ಇದ್ದಾರೆ.

ಇನ್ನು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ನೇತೃತ್ವದಲ್ಲಿ ಇವರೆಲ್ಲ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಗಾಯಗೊಂಡ ಮಾರ್ಕ್ ವುಡ್ ಹೊರತುಪಡಿಸಿ ಉಳಿದವರೆಲ್ಲ ಪ್ರಾಕ್ಟೀಸ್‌ಗೆ ಬಂದಿದ್ದರು.

ಇನ್ನು ಇವರಿಗೆ ವೈರಸ್‌ನ ಲಕ್ಷಣಗಳು ಕೋವಿಡ್ -19 ಅನ್ನು ಹೋಲುತ್ತಿಲ್ಲ. ಆದರೆ ಇಂಗ್ಲೆಂಡ್‌ ತಂಡವನ್ನು ಕಾಡುತ್ತಿರುವ ಅನಾರೋಗ್ಯದ ಸ್ವರೂಪ ಸ್ಪಷ್ಟವಾಗಿಲ್ಲ. ಅಸ್ವಸ್ಥ ಆಟಗಾರರಿಗೆ ವಿಶ್ರಾಂತಿ ಪಡೆಯಲು ಹೋಟೆಲ್‌ನಲ್ಲಿ ಉಳಿಯಲು ಸೂಚಿಸಲಾಗಿದೆ. ಬೆನ್‌ ಸ್ಟೋಕ್ಸ್ ಗೂ ಸೋಂಕು ತಗುಲಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಸರಣಿಯ ಟ್ರೋಫಿ ಅನಾವರಣವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!