Thursday, March 30, 2023

Latest Posts

ಮತ್ತೊಂದು ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೊಂದು ಮದುವೆ ಸಂಭ್ರಮದಲ್ಲಿದ್ದಾರೆ. ಸ್ವರಾ ಕುಟುಂಬದವರ ಆಸೆಯಂತೆ ಈಗಾಗಲೇ ಮದುವೆಯಾಗಿರುವ ಫಹಾದ್ ಜೊತೆ ಹಿಂದೂ ಸಂಪ್ರದಾಯದಂತೆ ನಟಿ ಮದುವೆಯಾಗುತ್ತಿದ್ದಾರೆ.

ಸದ್ಯ ಸಂಗೀತ, ಹಳದಿ ಶಾಸ್ತ್ರದ ಸಂಭ್ರಮದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ (Fahad Ahamad) ಜೊತೆ ರಿಜಿಸ್ಟರ್ ಮದುವೆಯಾಗುವ (Wedding) ಮೂಲಕ ನಟಿ ಸ್ವರಾ ಭಾಸ್ಕರ್ ಅಚ್ಚರಿ ಮೂಡಿಸಿದ್ದರು. ಇದೀಗ ತಂದೆ- ತಾಯಿ ಆಸೆಯಂತೆಯೇ ನಟಿ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ.

ದೆಹಲಿ ಮನೆಯಲ್ಲಿ ಈಗಾಗಲೇ ಸಂಗೀತ ಮತ್ತು ಹಳದಿ ಶಾಸ್ತ್ರವು ಸಡಗರದಿಂದ ನಡೆದಿದ್ದು, ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಖಾಸಗಿ ರೆಸಾರ್ಟ್‌ವೊಂದರಲ್ಲಿ ಸ್ವರಾ ಮತ್ತು ಫಹಾದ್ ಮಾರ್ಚ್ 16ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!