Thursday, March 23, 2023

Latest Posts

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಗೆ ಮತ್ತೆ ಮದುವೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸ್ವರಾ ಭಾಸ್ಕರ್ (Swara Bhaskar) ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmed) ಅವರನ್ನು ಸರಳವಾಗಿ ವಿವಾಹವಾಗಿದ್ದರು.

ಆದ್ರೆ ಅದೊಂದು ಅನ್ಯ ಧರ್ಮೀಯ ಮದುವೆಯಾಗಿದ್ದರಿಂದ ಸ್ವರಾ ಕುಟುಂಬಕ್ಕೆ ಈ ಮದುವೆ (Marriag) ಇಷ್ಟವಾಗಿಲ್ಲ. ಹಾಗಾಗಿ ಅದ್ಧೂರಿಯಾಗಿ ಮತ್ತೆ ಮಗಳ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹೊಸ ರೀತಿಯಲ್ಲಿ ಮದುವೆ ಕಾರ್ಡ್ (Card) ಅನ್ನೂ ಅವರು ರೆಡಿ ಮಾಡಿಕೊಂಡಿದ್ದಾರೆ.

ಮಾರ್ಚ್ 15 ಮತ್ತು 16ರಂದು ದೆಹಲಿಯಲ್ಲಿ ಎರಡು ದಿನಗಳ ಕಾಲ ಸ್ವರಾ ಮತ್ತು ಫಹಾದ್ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕಾಗಿ ಈಗಿನಿಂದಲೇ ಅವರ ಕುಟುಂಬ ಸಿದ್ಧತೆಯಲ್ಲಿ ತೊಡಗಿದೆ. ಈ ಮದುವೆಯಾಗಿಯೇ ಪ್ರತೀಕ್ ವಿನ್ಯಾಸಗೊಳಿಸಿರುವ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಮಗಳ ಮದುವೆಗೆ ನಿಮ್ಮ ಉಪಸ್ಥಿತಿ ಇರಲಿ ಎಂದು ಬರೆಯಿಸಲಾಗಿದೆ. ಅಲ್ಲದೇ, ಅಳಿಯನನ್ನು ನಮ್ಮ ಕುಟುಂಬ ಅಭಿನಂದಿಸುತ್ತದೆ ಎಂದೂ ಬರಹ ಇದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!