Saturday, April 1, 2023

Latest Posts

ರುಪೇ,ಯುಪಿಐ ಭಾರತದ ಗುರುತು: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರುಪೇ ಮತ್ತು ಯುಪಿಐ ತಂತ್ರಜ್ಞಾನಗಳು ಜಾಗತಿಕವಾಗಿ ಭಾರತದ ಗುರುತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಅಭಿವೃದ್ಧಿ ಅವಕಾಶ ನಿರ್ಮಾಣಕ್ಕೆ ಹಣಕಾಸು ಸೇವೆಗಳ ಕ್ಷಮತೆ ಹೆಚ್ಚಿಸುವ ವಿಚಾರದ ಬಗ್ಗೆ ಪ್ರಧಾನಿಗಳು ಪೋಸ್ಟ್ ಬಜೆಟ್ ವೆಬಿನಾರ್​ನಲ್ಲಿ (Post Budget Webinar) ಮಾತನಾಡಿದ ಅವರು, ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಪ್ಲಾಟ್​ಫಾರ್ಮ್​ಗಳು ಜಗತ್ತಿಗೆ ಮಾದರಿಯಾಗುತ್ತಿವೆ. ರುಪೇ ಮತ್ತು ಯುಪಿಐ ಕೇವಲ ಕಡಿಮೆ ಬೆಲೆಯ ಮತ್ತು ಹೆಚ್ಚು ಸುಭದ್ರ ತಂತ್ರಜ್ಞಾನ (Secure Technology) ಮಾತ್ರವಲ್ಲ, ಅವು ನಮ್ಮ ದೇಶದ ಗುರುತು ಎನಿಸಿಕೊಂಡಿದೆ ಎಂದಿದ್ದಾರೆ.

ಯುಪಿಐ ವಿಶ್ವದಲ್ಲಿ ಹಣಕಾಸು ಒಳಗೊಳ್ಳುವಿಕೆ (Financial Inclusion) ಮತ್ತು ಸಬಲೀಕರಣಕ್ಕೆ (Empowerment) ಒಂದು ಸಾಧನವಾಗಬೇಕು. ಅದಕ್ಕಾಗಿ ಒಟ್ಟಿಗೆ ಕೆಲಸ ಮಾಡಬೇಕಿದೆ. ನಮ್ಮ ಹಣಕಾಸು ಸಂಸ್ಥೆಗಳು ಹಣಕಾಸು ತಂತ್ರಜ್ಞಾನದೊಂದಿಗೆ ಸಾಧ್ಯವಾದಷ್ಟೂ ಹೆಚ್ಚು ಸಹಭಾಗಿತ್ವ ಹೊಂದುವ ಮೂಲಕ ತಮ್ಮ ವ್ಯಾಪ್ತಿಯನ್ನು ಮತ್ತು ಸಾಮರ್ಥ್ಯವನ್ನು ವಿಸ್ತರಿಸಬೇಕಿದೆ ಎಂದು ಪ್ರಧಾನಿಗಳು ಹೇಳಿದರು.

ಭಾರತದ ಡಿಜಿಟಲ್ ಪೇಮೆಂಟ್ ಸೌಕರ್ಯವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಭಾರತದ ಯುಪಿಐ ಪ್ಲಾಟ್​ಫಾರ್ಮ್ ಬಗ್ಗೆ ಬಹಳ ದೇಶಗಳು ಆಸಕ್ತಿ ತೋರಿವೆ. ಯುಪಿಐ ಅಳವಡಿಕೆಗೆ ಭಾರತದ ನೆರವು ಯಾಚಿಸುತ್ತಿವೆ. ಕಳೆದ ತಿಂಗಳಷ್ಟೇ ಭಾರತದ ಯುಪಿಐ ಮತ್ತು ಸಿಂಗಾಪುರದ ಪೇನೌ ವ್ಯವಸ್ಥೆಗಳನ್ನು ಜೋಡಿಸಿ ಎರಡೂ ದೇಶಗಳ ಜನರ ನಡುವೆ ವಿನೂತನವಾದ ಪೇಮೆಂಟ್ ವ್ಯವಸ್ಥೆ ಏರ್ಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!