ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹೇಳಿದ ‘ಆರ್​ಪಿ’ ಇವರು ಅಲ್ಲ ಅಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಹಾಗೂ ಬಾಲಿವುಡ್ ನಟಿ ಊರ್ವಶಿ ರೌಟೇಲಾ ನಡುವೆ ಪ್ರೀತಿನಾ ಅಥವಾ ಗೆಳೆಯರೇ ಎಂಬ ಗೊಂದಲದ ನಡುವೆ ಈ ಎಲ್ಲಾ ವದಂತಿಗಳಿಗೆ ನಟಿ ತೆರೆ ಎಳೆದಿದ್ದಾರೆ.

ಬಹಳ ದಿನಗಳಿಂದ ನಡೆಯುತ್ತಿರುವ ಈ ಇಬ್ಬರ ಟಾಕ್ ವಾರ್​ ನಾನಾ ಆಯಾಮ ಪಡೆಯುತ್ತಿದ್ದು, ಕೆಲವು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ನಟಿ ರೌಟೇಲಾ, ದೆಹಲಿಯ ಹೋಟೆಲ್‌ನಲ್ಲಿ ಆರ್‌ಪಿ ತನಗಾಗಿ ಕಾಯುತ್ತಿದ್ದರು. ಜೊತೆಗೆ ಅವರು ನನಗೆ 17 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು ಎಂದು ಹೇಳಿದ್ದರು.

ಆ ಬಳಿಕ ಆ ಆರ್​ಪಿ ಎಂದರೆ ಕ್ರಿಕೆಟಿಗ ರಿಷಬ್ ಪಂತ್ ಎಂದು ನೆಟ್ಟಿಗರು ಭಾವಿಸಿದ್ದರು. ಆದರೀಗ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ನಟಿ ಆರ್​ಪಿ ಪದದ ಅರ್ಥವನ್ನು ಬಹಿರಂಗಗೊಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಆರ್​ಪಿ ಪದದ ಬಗ್ಗೆ ವಿವರಣೆ ನೀಡಿರುವ ಊರ್ವಶಿ, ಜನರು ನನ್ನ ಹೇಳಿಕೆಯನ್ನು ಈ ರೀತಿ ತಪ್ಪಾಗಿ ಅರ್ಥೈಸುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ಆರ್‌ಪಿ ಎಂದರೆ ಕ್ರಿಕೆಟಿಗ ರಿಷಬ್ ಪಂತ್ ಅಲ್ಲ. ಬದಲಿಗೆ ನನ್ನ ಸಹ ನಟ ರಾಮ್ ಪೋತಿನೇನಿ ಎಂದರ್ಥ. ಅಲ್ಲದೆ ರಿಷಬ್ ಪಂತ್ ಅವರನ್ನು ಆರ್‌ಪಿ ಎಂದೂ ಕರೆಯುತ್ತಾರೆ ಎಂದು ನನಗೆ ತಿಳಿದಿರಲಿಲ್ಲ ಎಂದು ಊರ್ವಶಿ ಹೇಳಿಕೊಂಡಿದ್ದಾರೆ.

ಜನರು ಕೇವಲ ವಿಷಯಗಳನ್ನು ಊಹಿಸಿಕೊಳ್ಳುತ್ತಾ ಅವುಗಳ ಬಗ್ಗೆ ಬರೆಯುತ್ತಾರೆ. ಇಂತಹ ವದಂತಿಗಳನ್ನು ನಂಬುವವರಿಗೆ ಸ್ವಲ್ಪ ವಿಶ್ಲೇಷಣೆ ಮಾಡಿ ಎಂದು ಹೇಳುತ್ತೇನೆ. ನೀವೇನನ್ನೂ ನೈಜವಾಗಿ ನೋಡದೆ ಕೇವಲ ಯಾರೋ ಒಬ್ಬ ಯೂಟ್ಯೂಬರ್ ಅಥವಾ ಬೇರೊಬ್ಬ ವ್ಯಕ್ತಿ ಹೇಳಿದನ್ನು ಅಷ್ಟೂ ಸುಲಭವಾಗಿ ಹೇಗೆ ನಂಬುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ರಿಷಭ್ ಪಂತ್ ಜೊತೆಗಿನ ಅಫೇರ್ ಬಗ್ಗೆ ಇಷ್ಟು ದಿನ ಮೌನ ವಹಿಸಿದ್ದೇಕೆ ಎಂದು ಕೇಳಿದಾಗ, ನನ್ನ ಬಗ್ಗೆ ಜನರು ಏನು ಮಾತನಾಡಿಕೊಳ್ಳುತ್ತಾರೆ ಎಂಬುದಕ್ಕೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಟ್ರೋಲಿಂಗ್ ಜೀವನದ ಒಂದು ಭಾಗವಾಗಿದೆ. ಇದು ಒಂದು ಟ್ರೆಂಡ್‌ ಆಗಿದ್ದು, ಇದರ ಸುಳಿಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯದಲ್ಲಿ ಗುರಿಯಾಗಿರುತ್ತಾರೆ. ಪ್ರಧಾನಿ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಜೀವನದಲ್ಲಿ ನಾವು ಯೋಚಿಸಬೇಕಾದ ಇನ್ನೂ ಅನೇಕ ವಿಷಯಗಳಿವೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನನ್ನ ಕೆಲಸದತ್ತ ಗಮನ ಹರಿಸಲು ನಾನು ಆದ್ಯತೆ ನೀಡುತ್ತೇನೆ ಎಂದು ಟ್ರೋಲರ್‌ಗಳಿಗೆ ಊರ್ವಶಿ ಉತ್ತರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!