ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಅವರ ಮದುವೆಯಾಗಿ ಇಂದಿಗೆ 50 ವರ್ಷಗಳು ತುಂಬಿವೆ.
ಈ ಖುಷಿಯನ್ನು ನಿನ್ನೆಯೇ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅವರು, ಇನ್ನೂ ಕೆಲವೇ ಹೊತ್ತಿನಲ್ಲಿ ಜೂನ್ 3ನೇ ತಾರೀಖು ಬರುತ್ತದೆ. ನಾವಿಬ್ಬರೂ ಮದುವೆಯಾಗಿ (Wedding) ಐವತ್ತು ವರ್ಷ ತುಂಬುತ್ತದೆ ಎಂದು ಪತ್ನಿಗೆ ಅವರು ನೆನಪಿಸಿದ್ದಾರೆ.
ಜಯಾ ಬಚ್ಚನ್ (Jaya Bachchan) ಅವರನ್ನು ಅಮಿತಾಭ್ ಮದುವೆಯಾಗಿ ಐವತ್ತು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಪುತ್ರಿ ಶ್ವೇತಾ ಬಚ್ಚನ್ (Shweta Bachchan) ಶುಭ ಹಾರೈಸಿದ್ದಾರೆ. ಅಪ್ಪ ಅಮ್ಮನ ದಾಂಪತ್ಯಕ್ಕೆ ಸುವರ್ಣ ಮಹೋತ್ಸವ. ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುತ್ತೇನೆ. ನಿಮ್ಮ ಸುದೀರ್ಘ ದಾಂಪತ್ಯದ ಗುಟ್ಟೇನು ಎಂದು ಅಪ್ಪನನ್ನು ಕೇಳಿದ್ದೆ. ಅವರು ಅಮ್ಮನನ್ನು ನೆನಪಿಸಿಕೊಂಡಿದ್ದರು ಎಂದು ಅಪ್ಪನ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದಾರೆ.
ದಾಂಪತ್ಯಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಮತ್ತಷ್ಟು ಹಾರೈಕೆ, ಪ್ರೀತಿಯನ್ನು ಬಯಸಿರುವ ಅಮಿತಾಭ್, ಮುಂದೆ ಬರಲಿರುವ, ಈಗ ಬಂದಿರುವ ಹಾರೈಕೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.