CINEMA | ರಾಧಿಕಾ ಕುಮಾರಸ್ವಾಮಿಗೆ ಜೊತೆಯಾದ ಬಾಲಿವುಡ್ ಹೀರೋ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾವೊಂದಕ್ಕೆ ಒಕೆ ಹೇಳಿದ್ದಾರೆ. ಈ ಸಿನಿಮಾದಲ್ಲಿ ರಾಧಿಕಾಗೆ ಜೋಡಿಯಾಗಿ ಬರ‍್ತಿರೋದು ಬಾಲಿವುಡ್ ಹೀರೋ!

ಹೌದು, ಗೋಲ್‌ಮಾಲ್ ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಶ್ರೇಯಸ್ ಕನ್ನಡಕ್ಕೆ ಬರ‍್ತಿದ್ದಾರೆ. ಈ ಸಿನಿಮಾ ಬರೋಬ್ಬರಿ ಏಳು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಯುವ ನಿರ್ದೇಶಕ ಎಂ. ಶಶಿಧರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ರಾಧಿಕಾ ತಮಗೆ ಬಂದ ಎಲ್ಲಾ ಸಿನಿಮಾಗಳನ್ನೂ ಒಕೆ ಮಾಡೋದಿಲ್ಲ, ತಮ್ಮ ಮನಸ್ಸಿಗೆ ಇಷ್ಟವಾದ ಕಥೆಗಳನ್ನು ಮಾತ್ರ ಒಪ್ತಿದ್ದಾರೆ. ಈ ಸಿನಿಮಾಗೆ ಅಜಾಗ್ರತ ಎಂಬ ಹೆಸರಿಟ್ಟಿದ್ದು, ಕಥೆ ಹಾಗೂ ಅವರ ಪಾತ್ರ ರಾಧಿಕಾಗೆ ತುಂಬಾ ಇಷ್ಟವಾಗಿದೆಯಂತೆ! ಸೈಕಾಲಜಿಕಲ್ ಥ್ರಿಲ್ಲರ್ ಸಿನೆಮಾ ಇದಾಗಿದ್ದು, ಸಿನಿಮಾ ಹೇಗಿದೆ ಅನ್ನೋದಕ್ಕೆ ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!