ಗರ್ಲ್‌ಫ್ರೆಂಡ್‌ಗೆ ಬೇರೆ ಮದುವೆ, ಮನನೊಂದ ಪ್ರಿಯಕರ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ಸುಭಾಷ್ ನಗರದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಂಕಜ್ ಟೊಪ್ಪೋ ಎಂಬ ಯುವಕ ಗೋಡೆ ಮೇಲೆ ಡೆತ್ ನೋಟ್ ಬರೆದಿದ್ದಾನೆ. ನೀನು ಸುಖವಾಗಿರು, ನಾನು ಮತ್ತೆ ವಾಪಾಸ್ ಬರುವುದಿಲ್ಲ, ಹೊರಟೆ ಎಂದು ಬರೆದಿದ್ದು, ಪ್ರಿಯತಮೆಯ ಅಗಲಿಕೆಯಿಂದ ಸಾವಿಗೆ ಶರಣಾಗಿರುವ ಶಂಕೆ ಕಾಣಿಸಿದೆ.

ಕೂಲಿ ಕೆಲಸ ಮಾಡುತ್ತಿದ್ದ ಪಂಕಜ್‌ಗೆ ತನ್ನ ಪ್ರಿಯತಮೆಗೆ ಮದುವೆ ಅರೇಂಜ್ ಆಗಿರುವ ವಿಷಯ ತಿಳಿದಿದೆ, ಆಕೆಯ ಮದುವೆಗೆ ಹೋಗಿ ಬಂದ ನಂತರ ಆತ ಮನೆಯ ಬಾಗಿಲನ್ನು ತೆಗೆದಿರಲಿಲ್ಲ. ಎಷ್ಟು ಬಾರಿ ಕರೆ ಮಾಡಿದರೂ ಆತ ಫೋನ್ ರಿಸೀವ್ ಮಾಡಿರಲಿಲ್ಲ. ನಂತರ ಛಾವಣಿಯ ಮೂಲಕ ಇಣುಕಿ ನೋಡಿದಾಗ ಆತ ಮೃತಪಟ್ಟಿರುವುದು ತಿಳಿದು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!