Tuesday, March 28, 2023

Latest Posts

ʻಅವರನ್ನ ನೋಡಿ ನನಗೂ ಮದುವೆ ಆಗುವಾಸೆಯಾಗಿದೆ, ಒಳ್ಳೆ ಹುಡುಗನಿದ್ದರೆ ಹೇಳಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ಬಾಲಿವುಡ್ ನಲ್ಲಿ ಸೆಲೆಬ್ರಿಟಿಗಳು ಸಾಲು ಸಾಲಾಗಿ ಮದುವೆಯಾಗುತ್ತಿದ್ದಾರೆ. ಕಳೆದ ವರ್ಷ ವಿಕ್ಕಿ ಕೌಶಲ್-ಕತ್ರಿನಾ, ಆಲಿಯಾ-ರಣಬೀರ್, ಇತ್ತೀಚೆಗೆ ಅತಿಯಾಶೆಟ್ಟಿ-ಕೆಎಲ್ ರಾಹುಲ್, ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ… ಹೀಗೆ ಹಲವು ಸೆಲೆಬ್ರಿಟಿಗಳು ಸಪ್ತಪದಿ ತುಳಿದಿದ್ದಾರೆ. ಇದೀಗ ಬಾಲಿವುಡ್ ನಾಯಕಿಯೊಬ್ಬರು ಅವರ ಮದುವೆಗಳನ್ನು ನೋಡಿದ ನಂತರ ನನಗೂ ಮದುವೆಯಾಗುವ ಆಸೆಯಾಗಿದೆ ಎಂದು ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ.

ʻಪರಿಣಿತಿ ಚೋಪ್ರಾʼ ಹತ್ತು ವರ್ಷಗಳಿಂದ ಬಾಲಿವುಡ್‌ನಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳೊಂದಿಗೆ ಸತತವಾಗಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಈಗಂತೂ ಪರಿಣಿತಿ ಕೈಯಲ್ಲಿ ಮೂರು ಚಿತ್ರಗಳಿವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ಕಾಮೆಂಟ್ಗಳನ್ನು ಮಾಡಿದ್ದಾರೆ.

ಪರಿಣಿತಿ ಚೋಪ್ರಾ ಹೇಳಿದ್ದು.. ನಾನು ಸದ್ಯ ಒಂಟಿಯಾಗಿದ್ದೇನೆ. ಆದರೆ ಇತ್ತೀಚಿಗೆ ಬಾಲಿವುಡ್ ನಲ್ಲಿ ನಡೆಯುತ್ತಿರುವ ಮದುವೆಗಳನ್ನು ನೋಡಿ ನನಗೂ ಮದುವೆಯಾಗುವ ಆಸೆಯಿದೆ. ಅವರೆಲ್ಲರೂ ನನ್ನ ಸ್ನೇಹಿತರು, ಮದುವೆಯಾಗಿ ಖುಷಿಯಾಗಿದ್ದಾರೆ. ಬಹಳ ದಿನಗಳಿಂದ ಪ್ರೀತಿಸುತ್ತಿದ್ದವರೂ ಈಗ ಮದುವೆಯಾಗುತ್ತಿದ್ದಾರೆ. ಇದೀಗ ನಾನು ಮದುವೆಯಾಗಲು ಸಿದ್ಧಳಿದ್ದೇನೆ. ಆದರೆ ಒಳ್ಳೆಯದು ಹುಡುಗ ಇಲ್ಲ. ಮದುವೆಯ ನಂತರವೂ ಸಿನಿಮಾ ಮಾಡುತ್ತೇನೆ. ವೃತ್ತಿ ಮತ್ತು ಕುಟುಂಬ ಎರಡನ್ನೂ ಬ್ಯಾಲೆನ್ಸ್ ಮಾಡುತ್ತೇನೆ ಎಂದ ಅವರು, ಯಾರಿಗಾದರೂ ಒಳ್ಳೆ ಹುಡುಗ ಇದ್ದರೆ ದಯವಿಟ್ಟು ಹೇಳಿ ಎಂದು ಮನವಿ ಮಾಡಿದ್ದಾರೆ.

ಪರಿಣಿತಿ ಅವರ ಕಾಮೆಂಟ್‌ಗಳು ವೈರಲ್ ಆಗಿದ್ದು, ತಮ್ಮನ್ನು ಮದುವೆಯಾಗುವಂತೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಸ್ತಾಪಗಳು ಬರುತ್ತಿವೆ. ಈ ಪಂಜಾಬಿ ಮಹಿಳೆ ಯಾರನ್ನು ಮತ್ತು ಯಾವಾಗ ಮದುವೆಯಾಗುತ್ತಾರೆ ಎಂದು ನೋಡೋಣ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!