ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಪಾರ್ಟಿಗಳು ಒಂತರಾ ನಾಚಿಕೆಗೇಡಿನ ಸಂಗತಿ: ನಟಿ ಕಂಗನಾ ರನೌತ್
ಬಾಲಿವುಡ್‍ನ ನಟಿ ಕಂಗನಾ ರನೌತ್ ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ಸಿನಿಮಾ ರಂಗದಲ್ಲಾದ ತಮ್ಮ ಅನುಭವಗಳ ಬಗ್ಗೆ ಯಾವಾಗಲೂ ಬಹಿರಂಗವಾಗಿ ಮಾತನಾಡುತ್ತಾ ಇರುತ್ತಾರೆ
ಕಂಗನಾ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಬಾಲಿವುಡ್ ಪಾರ್ಟಿಗಳ ಬಗ್ಗೆ ಸಾಕಷ್ಟು ಆಸಕ್ತಿದಾಯಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ನಟಿ ಬಾಲಿವುಡ್ ಪಾರ್ಟಿಗಳ ಬಗ್ಗೆ ತನ್ನ ಅಸಮಾಧಾನವನ್ನು ಹೊರಹಾಕಿದ್ದಾರೆ. ಉದ್ಯಮದ ಪಾರ್ಟಿಗಳಲ್ಲಿ ಸೆಲೆಬ್ರಿಟಿಗಳ ನಡುವೆ ನಡೆಯುವ ಸಂಭಾಷಣೆಗಳನ್ನು ಕಂಗನಾ ತಿಳಿಸಿದ್ದಾರೆ.
ತಾರೆಯರು ತಮ್ಮ ಫುಡ್ ಸ್ಟೈಲ್ ಮತ್ತು ಲೈಫ್ ಸ್ಟೈಲ್ ಬಗ್ಗೆ ಮಾತನಾಡುತ್ತಾರೆ ಮತ್ತು ಯಾರು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಆಗಾಗ್ಗೆ ಗಾಸಿಪ್ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಬಾಲಿವುಡ್ ಪಾರ್ಟಿಗಳಿಗೆ ಕಂಗನಾ ಹೋದಾಗ ಆದ ಅನುಭವದ ಬಗ್ಗೆ ಕೇಳಿದಾಗ, ಅಲ್ಲಿ ತನಗೆ ಆಘಾತಕಾರಿ ಅನುಭವವಾಗಿದೆ ಮತ್ತು ನಟರು ನಡೆಸುವ ಸಂಭಾಷಣೆಗಳಿಂದ ತಾನು ಮುಜುಗರಕ್ಕೊಳಗಾಗುತ್ತೇನೆ ಎಂದು ಕಂಗನಾ ಬಹಿರಂಗಪಡಿಸಿದರು.
ಬಾಲಿವುಡ್‍ನಲ್ಲಿ ನಿಮಗೆ ಯಾರಾದರೂ ಸ್ನೇಹಿತರಿದ್ದಾರೆಯೇ ಎಂದು ಕಂಗನಾ ಅವರನ್ನು ಕೇಳಿದಾಗ, ಅವರಿಗೆ ಯಾರು ಸ್ನೇಹಿತರಿಲ್ಲ ಎಂದು ತಿಳಿಸಿದ್ದಾರೆ ಮತ್ತು ಅಂತಹ ಜನರೊಂದಿಗೆ ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಬಹಿರಂಗಪಡಿಸಿದರು.
ಬಾಲಿವುಡ್ ಮಂದಿ ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ಅವರು ಮೂರ್ಖರು ಎಂದು ನಟಿ ಹೇಳಿದ್ದಾರೆ. ಬಾಲಿವುಡ್‍ನಲ್ಲಿ ಕಾರು ಇತ್ಯಾದಿಗಳ ಬಗ್ಗೆ ಮಾತನಾಡುವ ಗಣ್ಯ ವ್ಯಕ್ತಿಯನ್ನು ಕಂಡು ನಾನು ಆಘಾತಕ್ಕೊಳಗಾಗುತ್ತೇನೆ. ಬಾಲಿವುಡ್ ಪಾರ್ಟಿಗಳು ಒಂತರಾ ನಾಚಿಕೆಗೇಡಿನ ಸಂಗತಿ ಎಂದು ಅವರು ತಿಳಿಸಿದ್ದಾರೆ.