ಬರಲಿದೆ ರಾಜೀವ್‌ ಗಾಂಧಿ ಹತ್ಯೆ ಕುರಿತ ವೆಬ್ ಸಿರೀಸ್!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಜಿ ಪ್ರಧಾನಿ ದಿವಗಂತ ರಾಜೀವ್ ಗಾಂಧಿ ಹತ್ಯೆ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಅನಿರುಧ್ಯ ಮಿತ್ರಾ ಅವರು ರಾಜೀವ್ ಗಾಂಧಿ ಹತ್ಯೆ ಮತ್ತು ಅದರ ನಂತರದ ಘಟನೆಗಳ ಕುರಿತು ‘ನೈಂಟಿ ಡೇಸ್:‌ ದಿ ಟ್ರೂ ಸ್ಟೋರಿ ಆಫ್‌ ಹಂಟ್‌ ಫಾರ್‌ ರಾಜೀವ್ ಗಾಂಧಿ ಅಸಾಸಿನ್‌ʼ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಈ ಪುಸ್ತಕ ಬಹಳ ಜನಪ್ರಿಯವಾಯಿತು. ಈಗ ಈ ಪುಸ್ತಕವನ್ನು ಆಧರಿಸಿ ಬಾಲಿವುಡ್‌ನಲ್ಲಿ ವೆಬ್ ಸೀರೀಸ್ ತಯಾರಾಗಲಿದೆ.

‘ಸಿಟಿ ಆಫ್ ಡ್ರೀಮ್ಸ್’ ವೆಬ್ ಸೀರೀಸ್ ಖ್ಯಾತಿಯ ನಾಗೇಶ್ ಕುಕುನೂರ್ ನಿರ್ದೇಶನದ ರಾಜೀವ್ ಗಾಂಧಿ ಹತ್ಯೆ, ಅದರ ನಂತರದ ಘಟನೆಗಳು ಮತ್ತು ಹಿಂದಿನ ಘಟನೆಗಳು ವೆಬ್ ಸಿರೀಸ್ ಆಗಲಿವೆ. ಅಪ್ಲಾಜ್ ಎಂಟರ್ಟೈನ್ಮೆಂಟ್ ಈ ಸರಣಿಯನ್ನು ನಿರ್ಮಿಸಲಿದೆ. ನಿರ್ಮಾಪಕ ಸಮೀರ್ ನಾಯರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ”ಸಂಚಲನ ಸೃಷ್ಟಿಸಿದ ರಾಜೀವ್ ಗಾಂಧಿ ಹತ್ಯೆ, ತನಿಖೆ, ಹಂತಕರ ಬಂಧನ..ಇದೆಲ್ಲ ನಮಗೆ ಪತ್ರಿಕೆಗಳ ಮೂಲಕ ತಿಳಿದು ಬಂದಿದೆ. ಈಗ ಈ ಎಲ್ಲಾ ಘಟನೆಗಳನ್ನು ದೃಶ್ಯ ರೂಪದಲ್ಲಿ ತೆರೆಗೆ ತರಲಿದ್ದೇವೆ’’ ಎಂದರು.

ಈ ವೆಬ್ ಸರಣಿಯಲ್ಲಿ ಯಾರ್ಯಾರು, ಯಾವ್ಯಾವ ಪಾತ್ರ ಪೋಷಣೆ ಮಾಡಲಿದ್ದಾರೆ. ಮತ್ತು ರಾಜೀವ್ ಗಾಂಧಿ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬ ವಿವರಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!