ಪೊಲೀಸರಿಂದ ಆಪರೇಷನ್ ಅಕ್ರಮ್-II; ಒಂದೇ ದಿನ 950 ಕ್ರಿಮಿನಲ್‌ಗಳ ಬಂಧನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
‘ಆಪರೇಷನ್ ಅಕ್ರಮ್-II’ ವಿಶೇಷ ಕಾರ್ಯಾಚರಣೆಯ ಭಾಗವಾಗಿ, ಹರಿಯಾಣ ಪೊಲೀಸರು ರಾಜ್ಯಾದ್ಯಂತ ಸರಣಿ ಸಂಘಟಿತ ದಾಳಿಗಳನ್ನು ನಡೆಸಿದ್ದು, ಐಪಿಸಿ, ಎನ್‌ಡಿಪಿಎಸ್, ಶಸ್ತ್ರಾಸ್ತ್ರ ಮತ್ತು ಅಬಕಾರಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಒಂದೇದಿನ 964 ಆರೋಪಿಗಳನ್ನು ಬಂಧಿಸಿ 710 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಗರವಾಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕ್ರಿಮಿನಲ್ ಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳುವುದು, ಬೀದಿ ಅಪರಾಧ, ಅಕ್ರಮ ಶಸ್ತ್ರಾಸ್ತ್ರಗಳ ಮೇಲೆ ನಿಯಂತ್ರಣ ಮತ್ತು ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ಯ ಮತ್ತು ಮಾದಕ ವಸ್ತುಗಳನ್ನು ಪತ್ತೆಹಚ್ಚುವ ಗುರಿಯೊಂದಿಗೆ ದೊಡ್ಡಮಟ್ಟದಲ್ಲಿ ದಾಳಿ ನಡೆಸಿದ್ದೇವೆ ಎಂದು ಹೇಳಿದ್ದೇವೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ದಾಳಿಗಳಲ್ಲಿ ಖುದ್ದು ಭಾಗವಹಿಸಿ ಕ್ರಿಮಿನಲ್ ಗಳ ಮೇಲಿನ ಶಿಸ್ತುಕ್ರಮವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿದರು.
“ಪ್ರತಿ ಜಿಲ್ಲೆಯ ಅಪರಾಧಿಗಳು ಮತ್ತು ಸಮಾಜವಿರೋಧಿ ಶಕ್ತಿಗಳ ಹೃದಯದಲ್ಲಿ ಕಾನೂನಿನ ಭಯವನ್ನು ಸೃಷ್ಟಿಸಲು ನಾವು ಬಯಸಿದ್ದೇವೆ. ಅವರಿದ್ದ ಬೀದಿಗಳು, ಮನೆಗಳ ಮೇಲೆ ದಾಳಿ ಮಾಡುವ ಮೂಲಕ ಅವರು ತಪ್ಪಿಸಿಕೊಳ್ಳಲು ಯಾವುದೇ ಅವಕಾಶವನ್ನು ನೀಡದೆ ಲಾಕಪ್‌ ಒಳಗೆ ತಳ್ಳಿದ್ದೇವೆ ಎಂದು ಅವರು ಹೇಳಿದರು.
ಲಭ್ಯ ಮಾಹಿತಿಗಳ ಪ್ರಕಾರ, 645 ತಂಡಗಳಾಗಿ ವಿಭಜಿಸಲಾಗಿದ್ದ 3500 ಪೊಲೀಸ್ ಸಿಬ್ಬಂದಿ ಹಲವಾರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಹಲವಾರು ಬಂಧಿತ ಆರೋಪಿಗಳು ಬಹಳ ಸಮಯದಿಂದ  ತಲೆತಪ್ಪಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಪಾಣಿಪತ್ ಜಿಲ್ಲೆಯಲ್ಲಿ 116, ಗುರುಗ್ರಾಮದಲ್ಲಿ 108 ಮತ್ತು ಅಂಬಾಲಾದಲ್ಲಿ 102 ಆರೋಪಿಗಳನ್ನು ಬಂಧಿಸಲಾಗಿದೆ. ಅಂತೆಯೇ, ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿತ ಆರೋಪಿಗಳಿಂದ 67 ಅಕ್ರಮ ಬಂದೂಕುಗಳು ಮತ್ತು 36 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.13.50 ಕೆಜಿ ಗಾಂಜಾ, 409.32 ಗ್ರಾಂ ಹೆರಾಯಿನ್, 488 ಗ್ರಾಂ ಚರಸ್, 75 ಗ್ರಾಂ ಅಫೀಮು, 31.1 ಗ್ರಾಂ ಸ್ಮ್ಯಾಕ್, 9.02 ಕೆಜಿ ಗಸಗಸೆ ಹೊಟ್ಟು, ಆರು ನಿಷೇಧಿತ ಚುಚ್ಚುಮದ್ದು ಮತ್ತು 90 ನಿಷೇಧಿತ ಡ್ರಗ್ ವಿಭಾಗದಲ್ಲಿ ಬರುವ 90 ಮಾತ್ರೆಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಜೂಜು ಕಾಯ್ದೆಯಡಿ ಬಂಧಿತ ಆರೋಪಿಗಳಿಂದ 9.27 ಲಕ್ಷ ರೂ.ಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ.
ಆಪರೇಷನ್ ಅಕ್ರಮ್ ಎನ್ನುವುದು ರಾಜ್ಯ ಮಟ್ಟದ ವಿಶೇಷ ಅಭಿಯಾನವಾಗಿದ್ದು, ಪೊಲೀಸ್‌ ತಂಡಗಳು ಅನೇಕ ಗುರಿಗಳ ಮೇಲೆ ಏಕಕಾಲದಲ್ಲಿ ದಾಳಿಗಳನ್ನು ನಡೆಸುತ್ತದೆ. ಇದರ ಅಡಿಯಲ್ಲಿ, ಕ್ರಿಮಿನಲ್ ಗಳಿಗೆ ತಪ್ಪಿಸಿಕೊಳ್ಳಲು ಅವಕಾಶವನ್ನು ಬಿಡದೆ ಗುರಿಯ ಮೇಲೆ ಜಂಟಿಯಾಗಿ ದಮನ ಮಾಡುವ ಉನ್ನತ ಮಾರ್ಗದರ್ಶನ ಪಡೆದಿರುವ ತಂಡಗಳನ್ನು ರಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!