ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಟೀಲು ದುರ್ಗಾ ಪರಮೇಶ್ವರಿ ದೇವರ ದರುಶನ ಪಡೆಯಲು ಕರ್ನಾಟಕಕ್ಕೆ ಬಂದಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಡಿಸಿಎಂ ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ವಿವಾದದ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಇಂದ್ರ, ಅರ್ಜುನರು ಕಲಾವಿದರಾಗಿರುವ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಕಲಾವಿದರೊಂದಿಗೆ ತಾಯಿ ಸರಸ್ವತಿ ಇರುತ್ತಾಳೆ. ಕಲಾವಿರೊಂದಿಗೆ ದುರ್ವರ್ತನೆ ಸರಿಯಲ್ಲ. ಕಲಾವಿದರ ನಟ್ಟು ಬೋಲ್ಟ್ ಟೈಟ್ ಮಾಡಲು ಹೋಗಿ ಬೇರೆಯದ್ದೇ ಆಗಬಹುದು ಎಂದು ಹೇಳಿದ್ದಾರೆ.
ತುಳಿತಕ್ಕೊಳಗಾದವರ ರಕ್ಷಣೆಗೆ ವಿಷ್ಣು ಜನ್ಮ ತಾಳಿದ್ದು ಗೊತ್ತೇ ಇದೆ. ಕಲಾವಿದರ ರಕ್ಷಣೆಗೆ ದೇವರು ಬಂದೇ ಬರುತ್ತಾರೆ ಎಂದು ಸ್ಯಾಂಡಲ್ವುಡ್ನ ಕಲಾವಿದರ ಪರವಾಗಿ ಕಂಗನಾ ಬ್ಯಾಟಿಂಗ್ ಮಾಡಿದ್ದಾರೆ.