ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಡಿಸಿಎಂ ಡಿಕೆಶಿ ಅವರು ಕನ್ನಡದ ನಟರಿಗೆ ನೆಟ್ಟು ಬೋಲ್ಟು ಟೈಟ್ ಮಾಡ್ತೀನಿ ಎಂದು ಆಡಿದ್ದ ಮಾತು ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟರಿಗೆ ಚಲನಚಿತ್ರೋತ್ಸವ ಆಹ್ವಾನ ನೀಡಿಲ್ವಾ? ಎಂಬ ಆರೋಪಕ್ಕೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವರಿಗೆ ಚಲನಚಿತ್ರೋತ್ಸವದ ಇನ್ವಿಟೇಶನ್ ಹೋಗಿಲ್ಲದೇ ಇರಬಹುದು. ಕೆಲವರಿಗೆ ಮಿಸ್ ಆಗಿರಬಹುದು. ಇನ್ನೂ ಕೆಲವರಿಗೆ ಕಳುಸಿರುವ ತಡವಾಗಿ ರೀಚ್ ಆಗಿರಬಹುದು. ಇನ್ನು ದೊಡ್ಡ ದೊಡ್ಡ ಕಲಾವಿದರು ಬಂದಾಗ ಪ್ರೋಟೋಕೋಲ್ ಸಮಸ್ಯೆ ಆಗುತ್ತದೆ. ಈಗ ಯಶ್, ಸುದೀಪ್, ದರ್ಶನ್ ಅವರೇ ಕಾರ್ಯಕ್ರಮಕ್ಕೆ ಬಂದ್ರೂ ಅಂದುಕೊಳ್ಳಿ ಹಾಗೆ ನಿಭಾಹಿಸಬೇಕಲ್ವಾ? ಅದು ವಿಧಾನಸಭೆ ಮುಂದೆ ನಡೆಯುತ್ತಿರೋದು ಸಿಎಂ ಬರುವ ತನಕವೂ ಒಳಗೆ ಬರೋಕೆ ಕಷ್ಟ ಆಗಬಹದು ಎಂದು ಸಾಧುಕೋಕಿಲ ಸಮಜಾಯಿಸಿ ಕೊಟ್ಟಿದ್ದಾರೆ.
ಚಲನಚಿತ್ರೋತ್ಸವದ ಆಹ್ವಾನ ಪತ್ರಿಕೆ, ಯಾವ ದಿನಾಂಕದಂದು ನೀಡಲಾಗಿದೆ ಎಂಬ ಮಾಹಿತಿ ಇದೆ. ಜೊತೆಗೆ ಯಾರು ಯಾರು ಆಹ್ವಾನ ಪತ್ರಿಕೆಯನ್ನು ವಾಪಸ್ ಮಾಡಿದ್ದಾರೆ. ಯಾವ ಕಾರಣಕ್ಕೆ ಕೆಲವರಿಗೆ ಆಹ್ವಾನ ಪತ್ರಿಕೆ ನೀಡಲಾಗಿಲ್ಲ ಎಂಬ ಮಾಹಿತಿ ಸಹ ಪಟ್ಟಿಯಲ್ಲಿದೆ. ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಪ್ರಮುಖ ನಟ, ನಟಿ ಮತ್ತು ನಿರ್ದೇಶಕರುಗಳ ಹೆಸರಿದೆ. ಸುದೀಪ್ ದರ್ಶನ್, ಗಣೇಶ್, ಡಾಲಿ, ಚಿಕ್ಕಣ್ಣ, ಹಲವಾರು ಮಂದಿ ಹಿರಿಯ ಮತ್ತು ಹೊಸ ನಟಿಯರ ಹೆಸರುಗಳು ಸಹ ಪಟ್ಟಿಯಲ್ಲಿವೆ. ಡಾಲಿ ಧನಂಜಯ ಮನೆ ಬದಲಿಸಿದ್ದ ಕಾರಣ ಅವರಿಗೆ ನೀಡಲಾಗಿಲ್ಲ ಎಂದು ಪಟ್ಟಿಯಲ್ಲಿದೆ. ಮಾನ್ವಿತಾ, ಆಹ್ವಾನವನ್ನು ವಾಪಸ್ ಕಳಿಸಿದ್ದಾರೆ. ಫೋನ್ ರಿಸೀವ್ ಮಾಡಿಲ್ಲ ಎಂದು ಪಟ್ಟಿಯಲ್ಲಿದೆ. ನಟ ಚಿಕ್ಕಣ್ಣ ಸಹ ಆಹ್ವಾನವನ್ನು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.