ಹೊಸದಿಗಂತ ಡಿಜಿಟಲ್ ಡೆಸ್ಕ್;
ಮಣಿಪುರ ಮಾಜಿ ಮುಖ್ಯಮಂತ್ರಿ ಎಂ. ಕೊಯಿರೆಂಗ್ ಅವರ ನಿವಾಸದ ಕಾಂಪೌಂಡ್ ಒಳಗೆ ಬಾಂಬ್ ದಾಳಿ ನಡೆದಿದೆ.
ಮೈತೇಯಿ ಸಮುದಾಯದವರು ಹೆಚ್ಚಿರುವ ವಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಪ್ರದೇಶದಲ್ಲಿ ಕೊಯಿರೆಂಗ್ ಅವರ ಮನೆ ಇದೆ.
ಇವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಬಂದಿದ್ದ 70 ವರ್ಷದ ವೃದ್ಧರೊಬ್ಬರ ಮೇಲೆ ಬಾಂಬ್ ಸಿಡಿದಿದ್ದು, ಅವರು ಮೃತಪಟ್ಟಿದ್ದಾರೆ. ಅವರ ಜೊತೆಗಿದ್ದ 13 ವರ್ಷ ಬಾಲಕಿಯೂ ಸೇರಿ ಐವರಿಗೆ ಗಾಯಗಳಾಗಿವೆ.
ಶುಕ್ರವಾರ ಒಂದೇ ದಿನದಲ್ಲಿ ಮಣಿಪುರದಲ್ಲಿ ಎರಡು ಸ್ಥಳಗಳಲ್ಲಿ ಈ ರೀತಿಯ ದಾಳಿಗಳು ನಡೆದಿವೆ.
ಈ ದಾಳಿಯನ್ನು ಕುಕಿ ಬುಡಕಟ್ಟು ಸಮುದಾಯದ ಭಯೋತ್ಪಾದಕರೇ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೊರ್‍ಯಾಂಗ್ ಅವರ ನಿವಾಸ ಮೇಲೆ ಅತ್ಯಾಧುನಿಕ ಬಾಂಬ್ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ) ಕೇಂದ್ರ ಕಚೇರಿಯ ಬಳಿಯೂ ಶುಕ್ರವಾರ ಬಾಂಬ್ ದಾಳಿ ನಡೆದಿದೆ.