ಅಫ್ಘಾನ್ ನಲ್ಲಿ ಸರ್ಕಾರಿ ಬಸ್‌ನಲ್ಲಿ ಬಾಂಬ್ ಸ್ಫೋಟ: ಏಳು ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಬಸ್‌ನಲ್ಲಿ ಬಾಂಬ್ ಸ್ಫೋಟಗೊಂಡು ಪರಿಣಾಮ ಆರು ಸರ್ಕಾರಿ ಉದ್ಯೋಗಿಗಳು ಸೇರಿ ಏಳು ಜನ ಮೃತಪಟ್ಟಿದ್ದಾರೆ.

ಅಫ್ಘಾನಿಸ್ತಾನದ ಉತ್ತರ ಬಾಲ್ಖ್ ಪ್ರಾಂತ್ಯದ ರಾಜಧಾನಿಯಾದ ಮಜರ್-ಇ-ಶರೀಫ್‌ನಲ್ಲಿ ಸರ್ಕಾರಿ ನೌಕರರನ್ನು ಕರೆದ್ಯೋಯಿಯುತ್ತಿದ್ದ ಬಸ್‌ನಲ್ಲಿ ಸ್ಫೋಟ ಸಂಭವಿಸಿದೆ.

ದೊಂದು ರಸ್ತೆ ಬದಿ ಹುದುಗಿಸಿದ ನೆಲಬಾಂಬು ಆಗಿದ್ದು, ಬಸ್‌ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಸ್ಫೋಟಗೊಂಡಿದ್ದು,ಎನ್ನಲ್ಲಾಗುತ್ತಿದೆ.
ಈ ಬಸ್‌ ಹಿರಾಟನ್ ಗಡಿ ಪಟ್ಟಣದ ಪೆಟ್ರೋಲಿಯಂ ನಿರ್ದೇಶನಾಲಯದ ನೌಕರರನ್ನು ಕರೆದೊಯ್ಯುತ್ತಿತ್ತು. ಈ ಅವಘಡದಲ್ಲಿ ಏಳು ಜನ ಮೃತಪಟ್ಟಿದ್ದಾರೆ ಆರಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ವಕ್ತಾರ ಮೊಹಮ್ಮದ್ ಆಸಿಫ್ ವಜಿರಿ ತಿಳಿಸಿದ್ದಾರೆ.

ಈ ಸ್ಫೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!