ಬಂಗಾಳದ ರಾಮನವಮಿ ಮೆರವಣಿಗೆ ದಿನ ಬಾಂಬ್‌ ಸ್ಫೋಟ: NIA ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ರಾಮನವಮಿ ಮೆರವಣಿಗೆ (RamaNavami) ದಿನ ನಡೆದ ಬಾಂಬ್‌ ಸ್ಫೋಟಗೊಂಡ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಹೈಕೋರ್ಟ್‌ (Kolkata High Court) ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಿ ಆದೇಶಿಸಿದೆ.

ಘಟನೆಯ ತನಿಖೆಯನ್ನು ಸಿಬಿಐ (CBI) ಮತ್ತು ಎನ್‌ಐಎಯಿಂದ ನಡೆಸಬೇಕೆಂದು ಕೋರಿ ಎರಡು ಸಾರ್ವಜನಿಕ ಅರ್ಜಿ (PIL) ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಬಾಂಬ್‌ ಸ್ಫೋಟದ ತನಿಖೆ ಎನ್‌ಐಎ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ತನಿಖೆ ನಡೆಸುವಂತೆ ಆದೇಶಿಸಿತು.

ಕೋರ್ಟ್‌ ಮುಂದಿನ ವಿಚಾರಣೆಯನ್ನು ಮೇ 10ಕ್ಕೆ ಮುಂದೂಡಿದ್ದು, ಈ ವೇಳೆ ಎನ್‌ಐಎ ತನಿಖೆಯ ವರದಿ ಸಲ್ಲಿಸಬೇಕೆಂದು ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!