Tuesday, August 16, 2022

Latest Posts

ಭಾರತ-ಪಾಕ್ ಗಡಿಯಲ್ಲಿ ಬಾಂಬ್ ಎಸೆದ ಡ್ರೋನ್: ಯೋಧರಿಂದ ಗುಂಡಿನ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನ ಅಮೃತಸರದ ಪಂಜ್‌ಗ್ರಾಹಿಯನ್ ಗಡಿ ಹೊರವಲಯದಲ್ಲಿ ಡ್ರೋನ್ ಮೂಲಕ ಸ್ಫೋಟಕಗಳನ್ನು ಎಸೆಯಲಾಗಿದೆ.
ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ಭಯೋತ್ಪಾದಕರ ಸ್ಫೋಟ ಪ್ರಯತ್ನ ವಿಫಲಗೊಳಿಸಿದ್ದಾರೆ. ಸ್ಫೋಟಕಗಳು ಡ್ರೋನ್‌ನಿಂದ ಕೆಳಗೆ ಬೀಳುತ್ತಿದ್ದಂತೆಯೇ ಎಚ್ಚೆತ್ತ ಯೋಧರು ಡ್ರೋನ್‌ನತ್ತ ಗುಂಡು ಹಾರಿಸಿದ್ದಾರೆ. ನಂತರ ಡ್ರೋನ್ ಪಾಕಿಸ್ತಾನ ಕಡೆಗೆ ಹಾರಿದೆ. ನಂತರ ಯೋಧರು ಶೋಧಕಾರ್ಯ ನಡೆಸಿದ್ದು, ಎರಡು ಕಡೆ ಸ್ಫೋಟಕಗಳು ಮತ್ತು ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss