Thursday, December 1, 2022

Latest Posts

ಇಸ್ತಾನ್‌ಬುಲ್‌ನಲ್ಲಿ ಮಹಿಳಾ ಉಗ್ರರಿಂದ ಬಾಂಬ್ ಸ್ಫೋಟ : ಸಾವಿನ ಸಂಖ್ಯೆ ಆರಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟರ್ಕಿಯ ಇಸ್ತಾನ್‌ಬುಲ್‌ನ ಪ್ರಸಿದ್ಧ ಇಸ್ತಿಕ್‌ಲಾಲ್ ಶಾಪಿಂಗ್ ಸ್ಟ್ರೀಟ್‌ನಲ್ಲಿ ಬಾಂಬ್ ಸ್ಫೋಟ ಮಾಡಲಾಗಿದೆ. ಸದಾ ಪ್ರವಾಸಿಗರಿಂದ ತುಂಬಿರುವ ಇಸ್ತಿಕ್‌ಲಾಲ್ ಸ್ಟ್ರೀಟ್‌ನಲ್ಲಿ ಮಹಿಳಾ ಉಗ್ರರು ಬಾಂಬ್ ಸ್ಫೋಟಿಸಿದ್ದು, ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ . 81ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಹಿಳಾ ಭಯೋತ್ಪಾದಕರು ಜನನಿಬಿಡ ಪ್ರದೇಶವನ್ನು ಆರಿಸಿ ದಾಳಿ ನಡೆಸಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಸ್ಫೋಟದಲ್ಲಿ ಗಾಯಗೊಂಡಿರುವ 81 ಜನರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಭಯೋತ್ಪಾದಕ ದಾಳಿ ಎನ್ನುವ ಮಾಹಿತಿಯಷ್ಟೇ ಹೊರಬಂದಿದೆ.

 

ಮಹಿಳಾ ದಾಳಿಕೋರರು ನಡೆಸಿದ ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವುದೇ ಭಯೋತ್ಪಾದಕ ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಮಹಿಳೆಯೊಬ್ಬರು ೪೦ಕ್ಕೂ ಹೆಚ್ಚು ನಿಮಿಷ ಬೆಂಚ್ ಮೇಲೆ ಕುಳಿತಿದ್ದಾರೆ. ಸ್ಫೋಟಕ್ಕೆ ಕೆಲವೇ ನಿಮಿಷ ಎನ್ನುವಂತೆ ಬೆಂಚ್‌ನಿಂದ ಎದ್ದು ಹೋಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!