ಅಮೃತಯಾತ್ರೆ: ಆರೋಗ್ಯ ವ್ಯವಸ್ಥೆಯ ಸುಧಾರಣೆ, ಜೀವಿತಾವಧಿ ಹೆಚ್ಚಿಸಿದ ಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯ ಬಂದು ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಹೊತ್ತಲ್ಲಿ ಗಮನಿಸಬೇಕಾದ ಅಂಶಗಳಲ್ಲೊಂದು ಜನರ ಜೀವಿತಾವಧಿಯ ಹೆಚ್ಚಳ. ಆರೋಗ್ಯ ಸೌಕರ್ಯಗಳತ್ತ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಅಮೃತಯಾತ್ರೆಯ ಸಂದರ್ಭದಲ್ಲಿ ದೇಶದ ಜನರ ಬದುಕುಳಿಯುವ ಅವಧಿಯನ್ನು ಹೆಚ್ಚಿಸಿರುವುದು ದೇಶ ಸಾಧಿಸಿದ ಮೈಲಿಗಳಲ್ಲೊಂದು.

1951ರ ಹೊತ್ತಿಗೆ ಪುರುಷರಲ್ಲಿ 37.2 ಹಾಗೂ ಮಹಿಳೆಯರಲ್ಲಿ 36.2 ಸರಾಸರಿ ವರ್ಷಗಳಷ್ಟಿತ್ತು ಜೀವಿತಾವಧಿ. ಆದರೆ ಇದು 2015 ರಿಂದ 2019ರವರೆಗಿನ ಕಾಲಘಟ್ಟದಲ್ಲಿ ಬಹುತೇಕ ದ್ವಿಗುಣಗೊಂಡಿದೆ. ಪುರುಷರಲ್ಲಿ 68.4 ಮತ್ತು ಮಹಿಳೆಯರಲ್ಲಿ 71.1 ವರ್ಷಗಳಿಗೆ ಹೆಚ್ಚಾಗಿದೆ.

ಆಯುಷ್ಮಾನ್‌ ಭಾರತ್‌, ರಾಷ್ಟ್ರೀಯ ಆರೋಗ್ಯ ಮಿಷನ್‌ ಹೀಗೇ ಜೀವಿತಾವಧಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ವೃದ್ಧರ ಆರೈಕೆಗೆಂದೇ ವಿಶೇಷ ಆಸ್ಥೆ ವಹಿಸಿ ರಾಷ್ಟ್ರೀಯ ಕಾರ್ಯಕ್ರಮಗಳ ಮೂಲಕ ದೇಶದ ಮೂಲೆಗಳಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ಸಫಲವಾಗಿರುವುದು ಈ ಸಾಧನೆಗೆ ಕಾರಣವಾದ ಮೂಲ ಅಂಶವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!