August 10, 2026
Monday, August 10, 2026
spot_img

ಮಂಗಳೂರು ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಕರೆ: ಕಡಲತಡಿಗೂ ಬಂತು ‘ವಿಧ್ವಂಸಕ’ರ ಥ್ರೆಟ್!

ಹೊಸದಿಗಂತ ಮಂಗಳೂರು:

ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಅನಾಮಿಕ ವ್ಯಕ್ತಿಯಿಂದ ಇಂದು ಬೆದರಿಕೆ ಕರೆ ಬಂದಿದ್ದು, ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಮಂಗಳೂರಿನ ಜನತೆ ಕೂಡ ಆತಂಕಿತರಾಗಿದ್ದರು.


ಬೆದರಿಕೆ ಕರೆಯ ಕುರಿತಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
‘ಬೆದರಿಕೆ ಕರೆ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ. ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ’ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.


ಮಂಗಳೂರಿನಲ್ಲಿ ಈ ಹಿಂದೆ ಕೂಡ ಜಿಲ್ಲಾ ನ್ಯಾಯಾಲಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಮುಂತಾದೆಡೆ ಬಾಂಬ್ ಇಟ್ಟಿರುವ ಬೆದರಿಕೆ ಕರೆ ಇ-ಮೇಲ್‌ಗಳು ಬಂದಿದ್ದವು. ಆದರೆ ಪರಿಶೀಲನೆ ವೇಳೆ ಇವೆಲ್ಲವೂ ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !