July 19, 2026
Sunday, July 19, 2026
spot_img

SHOCKING | ಮತ್ತೆ ಶುರುವಾಯ್ತು ಬಾಂಬ್‌ ಥ್ರೆಟ್‌! ಮಂಡ್ಯ-ಹಾವೇರಿ ಕೋರ್ಟ್‌ಗೆ ಬಾಂಬ್‌ ಬೆದರಿಕೆ ಕರೆ

ಹೊಸದಿಗಂತ ವರದಿ ಮಂಡ್ಯ-ಹಾವೇರಿ:

ರಾಜ್ಯದಲ್ಲಿ ಮತ್ತೆ ಬಾಂಬ್‌ ಬೆದರಿಕೆ ಕರೆಗಳು ಹೆಚ್ಚಾಗಿದ್ದು, ಮಂಡ್ಯ-ಹಾವೇರಿ ಕೋರ್ಟ್‌ಗೆ ಬಾಂಬ್‌ ಥ್ರೆಟ್‌ ಎದುರಾಗಿದೆ. ಮಂಡ್ಯ ನಗರದ ಕೋರ್ಟ್ ಗೆ ಬಾಂಬ್ ಬೆದರಿಕೆ ಹಿನ್ನಲೆ, ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಬಾಂಬ್ ಬೆದರಿಕೆಯ ವಿಷಯ ತಿಳಿದು ಕೋರ್ಟ್ ಕಲಾಪ ಸ್ಥಗಿತಗೊಂಡಿದ್ದು, ಜಡ್ಜ್ ಗಳು,ವಕೀಲರು ಹಾಗು ಕಕ್ಷಿದಾರರು ಹೊರಕ್ಕೆ ಬಂದಿದ್ದಾರೆ. ಸ್ಥಳಕ್ಕೆ ಬಾಂಬ್ ಸ್ಕ್ಯಾಡ್ ಆಗಮಿಸಿದ್ದು, ನ್ಯಾಯಾಲಯದ ಕಟ್ಟಡ ಸೇರಿ ಆವರಣದಲ್ಲಿ ತಪಾಸಣೆ ನಡೆಸುತ್ತಿದೆ.

ಕೋರ್ಟ್ ನ ಜಡ್ಜ್ ಒಬ್ಬರ ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ವಿಷಯ ತಿಳಿದಂತೆ ಹೆಚ್ಚಿನ ಜನ ಕೋರ್ಟ್‌ ಮುಂದೆ ಜಮಾಯಿಸಿದ್ದು, ಅವರನ್ನು ಚದುರಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಹಾವೇರಿ ಕೋರ್ಟ್ ಗೆ ಬಾಂಬ್ ಬೆದರಿಕೆ

ಇಲ್ಲಿನ ಹಳೆಯ ಪಿ.ಬಿ. ರಸ್ತೆಯಲ್ಲಿ ಇರುವ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಬಾಂಬ್ ಬೆದರಿಕೆ ಎದುರಾಗಿದೆ.

ಬೆದರಿಕೆ ಬಂದ ಬೆನ್ನಲ್ಲೇ ಎಲ್ಲಾ ವಕೀಲರು ಮತ್ತು ನ್ಯಾಯಾಲಯದ ವಿವಿಧ ಸಿಬ್ಬಂದಿ ಹಾಗೂ ಕೋರ್ಟ್ ಕೆಲಸಕ್ಕೆಂದು ಬಂದಿದ್ದ ಸಾರ್ವಜನಿಕರನ್ನು ದಿಢೀರ್ ಹೊರಕಳಿಸಲಾಯಿತು.

ಇದರ ಬೆನ್ನಲ್ಲೇ ಕೋರ್ಟ್ ಆವರಣಕ್ಕೆ ಧಾವಿಸಿದ ಪೊಲೀಸರು ತಪಾಸಣೆಗೆ ಮುಂದಾದರೂ ಮೊದಲು ಬೇಸ್ಮೆಂಟ್ ತಪಾಸಣೆ ನಡೆಸುತ್ತಿದ್ದಾರೆ ಎಂದು ಕೋರ್ಟ್ ನ ಮುಖ್ಯ ಆಡಳಿತಾಧಿಕಾರಿ ಸುದರ್ಶನ ಕುಲಕರ್ಣಿ ”ಹೊಸದಿಗಂತ” ಕ್ಕೆ ಮಾಹಿತಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !