Daily Horoscope | ಹೇಗಿದೆ ಗ್ರಹಗತಿಗಳು? ಹೇಗಿದೆ ಇಂದು ನಿಮ್ಮ ರಾಶಿ ಭವಿಷ್ಯ?

ಮೇಷ
ನಿರೀಕ್ಷಿಸಿರದ ಬೆಳವಣಿಗೆ ಖಾಸಗಿ ಬದುಕಲ್ಲಿ ಉಂಟಾದೀತು. ಅದನ್ನು ನಿಭಾಯಿಸಲು ಯಾವುದೇ ಸಮಸ್ಯೆಆಗದು.

ವೃಷಭ
ನಿಮ್ಮ ಮನಸ್ಥಿತಿ ಪದೇಪದೇ ಬದಲಾಗಬಹುದು. ತಾಳ್ಮೆ ಅತೀ ಅವಶ್ಯ.

ಮಿಥುನ
ಮನಸ್ತಾಪ ನಿವಾರಣೆ. ಪ್ರೀತಿ, ಸಂಬಂಧದ ವಿಚಾರದಲ್ಲಿ ನಿಮ್ಮ ಅಭೀಷ್ಟದಂತೆ ನಡೆಯುವುದು.

ಕಟಕ
ಪಾಲುದಾರರ ಜತೆ ಹಣದ ವಿಚಾರದಲ್ಲಿ ವಾಗ್ವಾದ ಸಂಭವ. ಕೊಟ್ಟ ಮಾತಿಗೆ ತಪ್ಪದಂತೆ ನೋಡಿಕೊಳ್ಳಿ.

ಸಿಂಹ
ನಿಮ್ಮ ಕೋಪತಾಪ ನಿಯಂತ್ರಿಸಿ. ಇದು ದಿನದ ನೆಮ್ಮದಿ ಹಾಳು ಮಾಡುವುದು.

ಕನ್ಯಾ
ನಿಮ್ಮ ಪ್ರಗತಿಗೆ ಹಲವಾರು ಅವಕಾಶದ ಬಾಗಿಲು ತೆರೆಯಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ.

ತುಲಾ
ಬಂಧುಮಿತ್ರರ ಜತೆ ಒಡನಾಟದ ಅವಕಾಶ. ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ.

ವೃಶ್ಚಿಕ
ಇತರರು ತಮ್ಮ ತಾಳಕ್ಕೆ ನಿಮ್ಮನ್ನು ಕುಣಿಸಲು ಅವಕಾಶ ಕೊಡದಿರಿ.

ಧನು
ಕೌಟುಂಬಿಕ ಸಮಸ್ಯೆ ಪರಿಹಾರ, ನಿರಾಳತೆ. ಅನವಶ್ಯ ವಿಚಾರಗಳಿಗೆ ದುಂದುವೆಚ್ಚ ಉಂಟಾದೀತು.

ಮಕರ
ಖಾಸಗಿ ಬದುಕು ಮತ್ತು ಆರ್ಥಿಕ ವಿಚಾರದಲ್ಲಿ ಇಂದು ಪ್ರಗತಿ. ಹಲವಾರು ವಿಷಯಗಳು ಇಂದು ನಿಮಗೆ ಉತ್ಸಾಹ ತುಂಬಲಿವೆ.

ಕುಂಭ
ಉಳಿದವರ ಭಾವನೆಗೆ ಬೆಲೆ ಕೊಡಿ. ಕುಟುಂಬದಲ್ಲಿ ಉದ್ವಿಗ್ನ ಸ್ಥಿತಿ ಉಂಟಾದೀತು.

ಮೀನ
ವೃಥಾ ಟೀಕೆ ಮಾಡದಿರಿ. ಕೆಲವರ ಸಲಹೆ ಇಂದು ನಿಮಗೆ ಅಪಥ್ಯ ಎನಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!