ಆರ್‌ಎಸ್‌ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ಬಾಂಬ್‌ ಬೆದರಿಕೆ; ಆತಂಕ ಸೃಷ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಲಕ್ನೋ ಮತ್ತು ಉನ್ನಾವ್‌ನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಚೇರಿಗಳನ್ನು ಸ್ಫೋಟಿಸುವುದಾಗಿ ಆಗಂತುಕರು ಬೆದರಿಕೆ ಒಡ್ಡಿದ್ದಾರೆ.
ಲಕ್ನೋ ಮತ್ತು ಉನ್ನಾವ್‌ನಲ್ಲಿರುವ ಆರ್‌ಎಸ್‌ಎಸ್ ಕಚೇರಿಗಳಿಗೆ ಕಚೇರಿಗಳನ್ನು ಬಾಂಬ್‌ ಸಿಡಿಸಿ ಸ್ಪೋಟಿಸುವುದಾಗಿ ದುಷ್ಕರ್ಮಿಗಳು ವಾಟ್ಸಾಪ್‌ ಸಂದೇಶದ ಮೂಲಕ ಬೆದರಿಕೆ ಒಡ್ಡಿದ್ದಾರೆ. ಈ ಸಂಬಂಧ ಲಕ್ನೋ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ನಿನ್ನೆ ರಾತ್ರಿ ರಾತ್ರಿ 8 ಗಂಟೆ ಸುಮಾರಿಗೆ ವಾಟ್ಸಾಪ್‌ನಲ್ಲಿ ಸಂದೇಶ ರವಾನೆಯಾಗಿದೆ. ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಈ ಸಂದೇಶಗಳನ್ನು ಸಂಘದ ಸದಸ್ಯ ನೀಲಕಂಠ ತಿವಾರಿಗೆ ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಳುಹಿಸಲಾಗಿದೆ. ತಕ್ಷಣವೇ ಪೊಲೀಸ್‌ ಇಲಾಖೆ ಅಲರ್ಟ್‌ ಆಗಿ ಶೋಧಕಾರ್ಯ ನಡೆಸಿದೆ. ಸೈಬರ್ ಸೆಲ್ ಸಹಾಯದಿಂದ ಸಂದೇಶ ಕಳುಹಿಸಿದ ಸಂಖ್ಯೆಯನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಲಕ್ನೋ ಪೊಲೀಸರು ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಾಗ್ಪುರದಲ್ಲಿ ಮೂರನೇ ವರ್ಷದ ಸಂಘ ಶಿಕ್ಷಾ ವರ್ಗದ (ಅಧಿಕಾರಿಗಳ ತರಬೇತಿ ಶಿಬಿರ) ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. ಯಾವುದೇ ಸಮುದಾಯವು ಉಗ್ರವಾದವನ್ನು ಆಶ್ರಯಿಸಬಾರದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಕರೆನೀಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!