ರಷ್ಯಾ ತೈಲ| ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳಲು ಭಾರತ ಯತ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವುದು ಗೊತ್ತೇ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತವು ಈ ಆಮದುಗಳನ್ನು ದ್ವಿಗುಣಗೊಳಿಸಲು ಪ್ರಯತ್ನಿಸುತ್ತಿದೆ. ಕಡಿಮೆ ಬೆಲೆಗೆ ತೈಲ ಖರೀದಿಗೂ ಮುಂದಾಗಿದೆ. ಭಾರತದ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳು ರೋಸ್ನೆಸ್ಟ್ ಎಂಬ ರಷ್ಯಾದ ಕಂಪನಿಯಿಂದ ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಖರೀದಿಸಲು ಪ್ರಯತ್ನಿಸುತ್ತಿವೆ.

ಉಕ್ರೇನ್-ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಯನ್ನು ನಿಷೇಧಿಸಿವೆ. ನಿಧಾನವಾಗಿ ಅನೇಕ ದೇಶಗಳು ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡುತ್ತಿವೆ. ಹೀಗಾಗಿ ಆ ಹೆಚ್ಚುವರಿ ತೈಲವನ್ನು ಖರೀದಿಸಲು ಭಾರತ ಪ್ರಯತ್ನಿಸುತ್ತಿದೆ. ಈ ಬಗ್ಗೆ ಭಾರತ ರಷ್ಯಾದ ತೈಲ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಈ ಚರ್ಚೆಗಳು ಪೂರೈಕೆ ವ್ಯವಸ್ಥೆ ಮತ್ತು ವಿಮಾ ಪಾಲಿಸಿಯನ್ನು ಒಳಗೊಂಡಿದ್ದು, ಪೂರೈಕೆ ಎಷ್ಟಿರಬಹುದು ಎಂಬಿತ್ಯಾದಿ ವಿವರಗಳನ್ನೂ ಉಭಯ ದೇಶಗಳು ಚರ್ಚಿಸುತ್ತಿವೆ. ಈ ಮಾತುಕತೆ ಯಶಸ್ವಿಯಾದರೆ ರಷ್ಯಾದಿಂದ ತೈಲ ಖರೀದಿ ದ್ವಿಗುಣಗೊಳ್ಳುತ್ತದೆ.

ತೈಲ ಖರೀದಿಗೆ ಅಗತ್ಯ ಹಣಕಾಸು ಒದಗಿಸುವ ನಿಟ್ಟಿನಲ್ಲಿ ಭಾರತೀಯ ಕಂಪನಿಗಳೂ ಬ್ಯಾಂಕ್ ಗಳ ಜತೆ ಮಾತುಕತೆ ನಡೆಸುತ್ತಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ರಿಲಯನ್ಸ್ ಇಂಡಸ್ಟ್ರೀಸ್ ರಷ್ಯಾದಿಂದ ತೈಲವನ್ನು ಖರೀದಿಸಲು ಆಸಕ್ತಿ ಹೊಂದಿವೆ.  ಈ ವರ್ಷದ ಫೆಬ್ರವರಿಯಿಂದ ಮೇ ವರೆಗೆ ಭಾರತವು ರಷ್ಯಾದಿಂದ 40 ಮಿಲಿಯನ್ ಬ್ಯಾರೆಲ್‌ಗಿಂತಲೂ ಹೆಚ್ಚು ಕಚ್ಚಾ ತೈಲವನ್ನು ಖರೀದಿಸಿದೆ. ಇದು 2021 ರ ವೇಳೆಗೆ ಒಟ್ಟು ಆಮದುಗಳಿಗಿಂತ ಶೇಕಡಾ 20ರಷ್ಟು ಹೆಚ್ಚು ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!