ಕೆಟ್ಟ ಟ್ರೆಂಡ್‌ ಆಗ್ತಿದೆ ಬಾಂಬ್‌ ಬೆದರಿಕೆ ಕರೆ, ವಿದ್ಯಾರ್ಥಿಗಳಿಂದಲೇ ಬಾಂಬ್‌ ಥ್ರೆಟ್‌! ರೀಸನ್‌ ಇಷ್ಟೇ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗೆ ಶಾಲಾ ಕಾಲೇಜುಗಳಿಗೆ ಬಾಂಬ್‌ ಬೆದರಿಕೆ ಕರೆಗಳು ಹೆಚ್ಚಾಗಿ ಬರುತ್ತಿವೆ. ಬಾಂಬ್‌ ಬೆದರಿಕೆ ಕರೆ ಬಂದ ನಂತರ ಮಕ್ಕಳನ್ನು ಶಾಲಾ-ಕಾಲೇಜುಗಳಿಂದ ಮನೆಗೆ ಕಳಿಸೋದು, ಬಾಂಬ್‌ ಸ್ಕ್ವಾಡ್‌ ಪರೀಕ್ಷಿಸಿ ಏನೂ ಇಲ್ಲ ಎಂದು ಹೇಳುವವರೆಗೂ ಪರೀಕ್ಷೆ ಹಾಗೂ ಇನ್ನಿತರ ಪ್ರಮುಖ ಈವೆಂಟ್‌ಗಳನ್ನು ನಿಲ್ಲಿಸಲಾಗುತ್ತದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡ ಕೆಲ ವಿದ್ಯಾರ್ಥಿಗಳು ಫೇಕ್‌ ಬಾಂಬ್‌ ಬೆದರಿಕೆ ಕರೆ ಮಾಡಲು ಆರಂಭಿಸಿದ್ದು, ಇದೊಂದು ಕೆಟ್ಟ ಟ್ರೆಂಡ್‌ ಆಗಿದೆ.

ರೀಕ್ಷೆಗೆ ಹಾಜರಾಗಲು ಬಯಸದೇ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ದೆಹಲಿ ಪೊಲೀಸರುಬಂಧಿಸಿದ್ದಾರೆ. ವಿಚಾರಣೆ ವೇಳೆ ವಿದ್ಯಾರ್ಥಿ 23 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತ ಅಂಕಿತ್ ಚೌಹಾಣ್ ಮಾತನಾಡಿ, ಶಂಕಿತ ವಿದ್ಯಾರ್ಥಿ ದೆಹಲಿಯ 23 ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದ. ತಾನು ಈ ಹಿಂದೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಪ್ರಾಪ್ತ ಯುವಕ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಶಾಲೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಲು ತಿರ್ಮಾನಿಸಿದ್ದ, ಈ ಹಿನ್ನೆಲೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದು, ಇದರಿಂದ ಪರೀಕ್ಷೆ ರದ್ದಾಗಲಿ ಎಂದು ಆತ ಬಯಸಿದ್ದ ಎಂದು ತಿಳಿಸಿದ್ದಾರೆ.

ನ.28 ರಂದು ರೋಹಿಣಿ ಪ್ರಶಾಂತ್ ವಿಹಾರ್ ಪಿವಿಆರ್ ಮಲ್ಟಿಪ್ಲೆಕ್ಸ್ನಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಅದಾದ ಒಂದು ದಿನದ ನಂತರ ಹಲವಾರು ಶಾಲೆಗಳು ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದ್ದವು. ಜೊತೆಗೆ ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್‌ಗೆ ಬೆದರಿಕೆ ಇಮೇಲ್ ಬಂದಿತ್ತು. ಪೊಲೀಸರ ತನಿಖೆಯ ವೇಳೆ ವಿದ್ಯಾರ್ಥಿಯೇ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಎಂದು ತಿಳಿದುಬಂದಿದೆ.

ಕಳೆದ ತಿಂಗಳು 11 ದಿನಗಳಲ್ಲಿ 100ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳು ದೆಹಲಿ ಶಾಲೆಗಳನ್ನು ಅಸ್ತವ್ಯಸ್ತಗೊಳಿಸಿತ್ತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!