CINE | ‘ಪುಷ್ಪ 2′ ಸಕ್ಸಸ್ ನಂತರ ಹೊಸ ಪ್ರಾಜೆಕ್ಟ್‌ನತ್ತ ಮುಖ ಮಾಡಿದ ನಟ ಅಲ್ಲು ಅರ್ಜುನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುಷ್ಪ 2 ವಿವಾದದ ನಡುವೆ, ಅಲ್ಲು ಅರ್ಜುನ್ ಹೊಸ ಪ್ರಾಜೆಕ್ಟ್‌ನತ್ತ ಮುಖ ಮಾಡಿದ್ದಾರೆ. ಖ್ಯಾತ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಕಚೇರಿಯಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ನಟ ಅವರ ಜೊತೆ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ.

ಪುಷ್ಪ 2 ಕಾಲ್ತುಳಿತದ ಸಂಬಂಧ ಅಲ್ಲು ಅರ್ಜುನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ವಿವಾದದ ನಡುವೆಯೇ ಹೊಸ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಂಜಯ್ ಲೀಲಾ ಬನ್ಸಾಲಿ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡುತ್ತಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ, ಎರಡೂ ಕಡೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ.

ಅಲ್ಲು ಅರ್ಜುನ್ ನಿನ್ನೆ ಮುಂಬೈಗೆ ಆಗಮಿಸಿದ್ದಾರೆ. ಈ ವೇಳೆ ಬನ್ಸಾಲಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ಚಿತ್ರದ ಬಗ್ಗೆ ಚರ್ಚೆ ನಡೆದಿರಬಹುದು ಎಂದು ಹಲವರು ಊಹಿಸುತ್ತಿದ್ದಾರೆ. ಈ ಹಿಂದೆ ಚಿತ್ರದ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗೆ ಈಗ ಪುಷ್ಟಿ ಸಿಕ್ಕಿದೆ. ಪ್ರಸ್ತುತ ವದಂತಿಗಳು ನಿಜವೇ? ಇಬ್ಬರ ಕಡೆಯಿಂದ ಸಿನಿಮಾ ಕುರಿತು ಗುಡ್ ನ್ಯೂಸ್ ಸಿಗುತ್ತಾ ಎಂದು ಕಾದುನೋಡಬೇಕಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!