ದೆಹಲಿ ಶಾಲೆಯೊಂದಕ್ಕೆ ಬಾಂಬ್‌ ಬೆದರಿಕೆ ಸಂದೇಶ: ತನಿಖೆ ಚುರುಕುಗೊಳಿಸಿದ ಖಾಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ಬಾಂಬ್‌ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಶಾಲೆಗಳನ್ನು ಗುರಿಯಾಗಿಸಿ ಬರುತ್ತಿರುವ ಇಂತಹ ಸಂದೇಶಗಳಿಂದಾಗಿ ಪೋಷಕರು ಭಯಭೀತರಾಗಿದ್ದಾರೆ. ಇದೀಗ ಇಂದು ಮತ್ತೊಂದು ಶಾಲೆಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿದ್ದು, ಪೊಲೀಸರು ಅಲರ್ಟ್‌ ಆಗಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ಮಥುರಾ ರಸ್ತೆಯಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‌ಗೆ ಇ-ಮೇಲ್‌ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಅಧಿಕಾರಿಗಳು ತನಿಖೆಗಿಳಿದಿದ್ದಾರೆ. ಈ ನಿಟ್ಟಿನಲ್ಲಿ ಬಾಂಬ್‌ ಸ್ಕ್ವಾಡ್‌, ಪೊಲೀಸರು, ಅಗ್ನಿಶಾಂಖ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ದೆಹಲಿ ಅಗ್ನಿಶಾಮಕ ಸೇವೆ ತಿಳಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!