ತಡವಾಗಿ ಬಂದಿದ್ದಲ್ಲದೆ ಪತ್ರಕರ್ತರಿಗೆ ಡಿ.ಕೆ.ಶಿವಕುಮಾರ್ ಬೆದರಿಕೆ: ಬಿಜೆಪಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುದ್ದಿಗೋಷ್ಠಿಗೆ ಒಂದು ಗಂಟೆ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರಕರ್ತರಿಗೆ ಬೆದರಿಕೆ ಹಾಕಿದ್ದಾರೆ. ಡಿಕೆಶಿ ಗೊಡ್ಡು ಬೆದರಿಕೆಗೆ ಬಗ್ಗದ ಪತ್ರಕರ್ತರು ಡಿಕೆಶಿಗೆ ಬಹಿಷ್ಕಾರ ಹಾಕಿದ್ದು, ಅವರಿಗೆ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡದಿರಲು ನಿರ್ಧರಿಸಲಾಗಿದೆ. ಮಾಧ್ಯಮಗಳು ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಡಿಕೆಶಿ ಸಮರ್ಥಿಸಿಕೊಂಡಿದ್ದು, ಎಲ್ಲಾ ಸಮಯ ಸಂದರ್ಭ ಒಂದೇ ಆಗಿರುವುದಿಲ್ಲ ಮತ್ತು ಕೆಲವೊಮ್ಮೆ ವಿಳಂಬವಾಗುತ್ತದೆ ಎಂದು ವಿವರಿಸಿದರು. ಅವರ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಿಸಿದ್ದರಿಂದ ಮಾಧ್ಯಮಗೋಷ್ಠಿ ವಿಳಂಬವಾಯಿತು ಎಂಬ ಕಾರಣ ಕೊಟ್ಟಿದ್ದಾರೆ.

ಇದೇ ವೇಳೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ”ಯೋಜಿತ ಸಮಯದಲ್ಲಿ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಸುದ್ದಿಗೋಷ್ಠಿ ಯಾವಾಗ, ಎಷ್ಟು ಮುಖ್ಯ, ಎಂದು ನನಗೆ ಗೊತ್ತು. ಹಾಗೆ ಹೇಳಿದ್ದಕ್ಕೆ ನನ್ನನ್ನು ಬ್ಲಾಕ್ ಮೇಲ್ ಮಾಡಲು ಹೋಗಬೇಡಿ” ಎಂದರು. ಬಹಿಷ್ಕಾರಕ್ಕೆ ಕರೆ ನೀಡಿದ ವರದಿಗಾರರನ್ನು ಹೆಸರಿಸುವಂತೆ ಡಿಕೆ ತಮ್ಮ ವೈಯಕ್ತಿಕ ಮಾಧ್ಯಮ ಸಂಯೋಜಕರಲ್ಲಿ ಕೇಳಿದ್ದಾರೆ. ಅಂತಹವರ ವಿರುದ್ಧ ಆಯಾ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಬೆದರಿಕೆ ಹಾಕಿದ್ದಕ್ಕೆ ಭಾರತೀಯ ಜನತಾ ಪಕ್ಷ ಟೀಕಿಸಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ಡಿಕೆ ಶಿವಕುಮಾರ್ ತಡವಾಗಿ ಬಂದರು. ಹಾಗಾಗಿಯೇ ಮಾಧ್ಯಮಗಳು ಅವರಿಗೆ ಬಹಿಷ್ಕಾರ ಹಾಕಿವೆ. ಅದಕ್ಕಾಗಿ ಮಾಧ್ಯಮಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಆತ ತಡ ಮಾಡುವುದು ಹೊಸದಲ್ಲ. ಮೊದಲು ತನ್ನ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು. ಪತ್ರಕರ್ತರು ಹಣ/ಹೆಂಡಕ್ಕಾಗಿ ತಮ್ಮ ಸ್ವಾಭಿಮಾನವನ್ನು ಮಾರಿಕೊಳ್ಳುವುದಿಲ್ಲ ಎಂದು ಡಿಕೆಶಿ ವರ್ತನೆಗೆ ಕಿಡಿ ಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!