ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಈ ದಿನ ನಿಮ್ಮ ಬದುಕಲ್ಲಿ ಬದಲಾವಣೆ ತರುವುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಆತ್ಮೀಯರೊಂದಿಗೆ ದಿನ ಕಳೆಯುವ ಅವಕಾಶ. ಸಂಬಂಧ ವೃದ್ಧಿ.
ವೃಷಭ
ಹಣ ಗಳಿಕೆ. ದೂರ ಪ್ರಯಾಣ ಸಂಭವ. ಕೌಟುಂಬಿಕ ಬೇಡಿಕೆಗಳು ಹೆಚ್ಚುತ್ತವೆ. ಬಂಧುಗಳಿಂದ ಸಹಕಾರ ಪಡೆಯುವಿರಿ. ಸಂಗಾತಿ ಜತೆಗೆ ಕಾಲಕ್ಷೇಪ.
ಮಿಥುನ
ಆಪ್ತರೊಂದಿಗೆ ಸಂವಾದ. ಉದ್ಯೋಗದ ವಿಷಯದಲ್ಲಿ ಆತಂಕ ದೂರವಾಗಲಿದೆ. ಹಣಕ್ಕೆ ಸಂಬಂಧಿಸಿದ ಬಿಕ್ಕಟ್ಟೂ ಪರಿಹಾರ. ಸೂಕ್ತ ನೆರವು ಲಭ್ಯವಾಗುವುದು.
ಕಟಕ
ಉದ್ಯೋಗ ಬದಲಾವಣೆಗೆ ಕಾಲ ಪ್ರಶಸ್ತವಾಗಿದೆ. ಹಣದ ಹರಿವು ಹೆಚ್ಚಳ. ಹೊಸ ಸಂಬಂಧ ಕೂಡಿ ಬರಬಹುದು. ಪ್ರೀತಿಯಲ್ಲಿ ಯಶಸ್ಸು.
ಸಿಂಹ
ನಿಮಗೆ ಶುಭದಿನ. ಕಾರ್ಯದಲ್ಲಿ ಸಫಲತೆ. ವಿವಾಹಾಕಾಂಕ್ಷಿ ಗಳಿಗೆ ಸಂಬಂಧ ಕೂಡಿಬರಬಹುದು. ಉದ್ಯೋಗದಲ್ಲಿ ಯಶಸ್ಸು, ಹಣ ಗಳಿಕೆ.
ಕನ್ಯಾ
ಕೆಲವು ವಿಷಯಗಳಿಗೆ ಸಂಬಂಧಿಸಿ ನಿಮ್ಮ ಮನಸ್ಸಿನಲ್ಲಿ ಮೂಡಿದ್ದ ಆತಂಕಗಳು ನಿವಾರಣೆ ಆಗಲಿವೆ. ಕೆಟ್ಟು ಹೋದ ಸಂಬಂಧವು ಮತ್ತೆ ಸುಧಾರಣೆ ಕಾಣಲಿದೆ.
ತುಲಾ
ಫಲಪ್ರದ ದಿನ. ಕೌಟುಂಬಿಕವಾಗಿ ಸಂಬಂಧ ಸುಧಾರಿಸುವುದು. ಹಣ ಗಳಿಕೆಯಲ್ಲೂ ಸಕಾರಾತ್ಮಕ ಬೆಳವಣಿಗೆ. ಆರೋಗ್ಯ ವೃದ್ಧಿ.
ವೃಶ್ಚಿಕ
ಪ್ರಮುಖ ಹೊಣೆಗಾರಿಕೆ ಯನ್ನು ಇಂದು ಪೂರೈಸಬೇಕಾಗುವುದು. ಕೌಟುಂಬಿಕ ಬಿಕ್ಕಟ್ಟನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ವಿವಾದಕ್ಕೆ ಸಿಲುಕದಿರಿ.
ಧನು
ಎಲ್ಲಾ ವಿಷಯಗಳಲ್ಲಿ ಇಂದು ನೀವು ಸಹನೆ ಕಾಯ್ದುಕೊಳ್ಳಬೇಕು. ವಾಗ್ವಾದದಿಂದ ದೂರವಿರಿ. ಪ್ರಮುಖ ನಿರ್ಧಾರ ಇಂದು ತೆಗೆದುಕೊಳ್ಳಬೇಡಿ.
ಮಕರ
ಭಾವನಾತ್ಮಕ ಏರುಪೇರು. ಸಂಗಾತಿ ಜತೆಗೆ ವಾಗ್ವಾದ ಉಂಟಾದೀತು. ಆರ್ಥಿಕ ನಷ್ಟವನ್ನೂ ಅನುಭವಿಸುವಿರಿ. ಫಲಪ್ರದ ದಿನವಲ್ಲ.
ಕುಂಭ
ಇಂದು ಕಾರ್ಯದಲ್ಲಿ ಸಫಲತೆ ಸಿಗುವು ದಾದರೂ ಅದಕ್ಕೆ ಬಹಳಷ್ಟು ಶ್ರಮ ಪಡಬೇಕಾಗುವುದು. ಬೆವರು ಹರಿಸದೆ ಫಲ ದೊರಕುವುದಿಲ್ಲ.
ಮೀನ
ನಿಮ್ಮ ಮುಕ್ತ ಮಾತು ಕತೆಯು ಸಂಬಂಧ ಸುಧಾರಿಸಲು ನೆರವಾಗಲಿದೆ. ತಪ್ಪಭಿಪ್ರಾಯ ನೀಗಿಸಲಿದೆ. ಆರ್ಥಿಕ ಪ್ರಗತಿ ಉತ್ತಮ.