ಪ್ರಧಾನಿಯಾದ ತಿಂಗಳೊಳಗೆ ʼವಿಶ್ವಾಸʼ ಕಳೆದುಕೊಂಡ ಲಿಜ್‌ ಟ್ರಸ್:‌ ರಿಷಿ ಸುನಾಕ್‌ ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಮತ್ತೆ ಫೆವರೇಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೆಲ ತಿಂಗಳ ಹಿಂದಷ್ಟೆ ನಡೆದ ಬ್ರಿಟನ್‌ ಪ್ರಧಾನಿ ಹುದ್ದೆ ಸ್ಪರ್ಧಿಗಳ ನಡುವಿನ ನಿಕಟ ಪೈಪೋಟಿಯ ಕಾರಣದಿಂದಾಗಿ ಜಗತ್ತಿನ ಗಮನ ಸೆಳೆದಿತ್ತು. ಹುದ್ದೆಗೆ ಸ್ಪರ್ಧಿಸಿದ್ದ ಭಾರತೀಯ ಸಂಜಾತ ರಿಷಿ ಸುನಾಕ್‌ ಆರಂಭದಿಂದ ಕೊನೆವರೆಗೂ ಭಾರೀ ಮುನ್ನಡೆಯನ್ನು ಪಡೆಯುವ ಮೂಲಕ ಪ್ರಧಾನಿ ಹುದ್ದೆಗೆ ಫೆವರಿಟ್‌ ಅಭ್ಯರ್ಥಿಯಾಗಿ ಮುನ್ನಡೆದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಎಲ್ಲವೂ ಬದಲಾಗಿತ್ತು. ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಕುತಂತ್ರ ಹಾಗೂ ರಿಷಿ ಭಾರತೀಯ ಮೂಲದ ಹಿನ್ನೆಲೆ ಅವರಿಗೆ ಪ್ರಧಾನಿ ಪಟ್ಟವನ್ನು ಕೊಂಚದರಲ್ಲಿ ತಪ್ಪಿಸಿದ್ದವು. ಅಂತಿಮ ವಾಗಿ ಬ್ರಿಟನ್‌ ಪ್ರಧಾನಿ ಪಟ್ಟದ ಫಲಿತಾಂಶಗಳವನ್ನು ಗಮನಿಸಿದವರೆಲ್ಲಾ ರಿಷಿ ಸುನಾಕ್‌ ಗೆ ನ್ಯಾಯವಾಗಿ ದಕ್ಕಬೇಕಿದ್ದ ಪಟ್ಟ ಲಿಜ್‌ ಟ್ರಸ್‌ ಗೆ ಪಾಲಾಯ್ತು ಎಂದುಕೊಂಡಿದ್ದರು. ಆದರೆ, ಇದಾಗಿ ಕೆಲವೇ ದಿನಗಳಲ್ಲಿ ಬ್ರಿಟಿಷ್ ರಾಜಕೀಯ ಅತ್ಯಂತ ಗಮನಾರ್ಹವಾದ ರಾಜಕೀಯ ಪುನರಾಗಮನವನ್ನು ನೋಡುತ್ತಿದೆ ಎಂದು ಹೇಳಲಾಗುತ್ತಿದೆ.
ಲಿಜ್ ಟ್ರಸ್ ಬ್ರಿಟನ್ ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡು ಕೇವಲ ಒಂದು ತಿಂಗಳಲ್ಲಿ ತಮ್ಮ ಸಂಸದರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಮತ್ತೊಂದು ವಿಚಾರವೆಂದರೆ, ರಿಷಿ ಸುನಾಕ್‌ ಪ್ರಧಾನಿ ಹುದ್ದೆಗೇರಲು ಮತ್ತೆ ಫೇವರಿಟ್‌ ಎನಿಸಿಕೊಳ್ಳುತ್ತಿದ್ದಾರೆ.
ಪ್ರಧಾನಿ ಹುದ್ದೆಯನ್ನು ಏರುವ ಮೊದಲು ಲಿಜ್‌ ಟ್ರಸ್‌ ಹಲವಾರು ಅಶ್ವಾಸನೆ ನೀಡಿದ್ದರು. ಆದರೆ ಅಧಿಕಾರಕ್ಕೆ ಏರಿದ ಬಳಿಕ ಟ್ರಸ್‌ ದೌರ್ಬಲ್ಯಗಳು ಬೆಳಕಿಗೆ ಬರುತ್ತಿವೆ. ಹಣದುಬ್ಬರ ನಿಯಂತ್ರಣದ ಬಗ್ಗೆ ಆಕರ್ಷಕ ಭರವಸೆಗಳನ್ನು ನೀಡಿದ್ದ ಟ್ರಸ್‌ ಯಾವುದೇ ಕ್ರಮಕೈಗೊಂಡಿಲ್ಲ. ಚುನಾವಣೋತ್ತರದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸದೇ ಉಲ್ಟಾ ಹೊಡೆಯುತ್ತಿರುವ ಟ್ರಸ್‌ ಜನಪ್ರೀಯತೆ ನಿಧಾನವಾಗಿ ಕುಸಿಯುತ್ತಿದ್ದು,  ರಿಷಿ ಸುನಾಕ್ ಈಗ ಮತ್ತೆ ಬುಕ್ಕಿಗಳ ಅಚ್ಚುಮೆಚ್ಚಿನ ವ್ಯಕ್ತಿಯಾಗಿ ಮೂಡಿಬಂದಿದ್ದಾರೆ. ಟ್ರಸ್‌ ಗೆ ಗೆ ಬೆಂಬಲವಾಗಿ ನಿಂತಿದ್ದ ಆಪ್ತರಾಗಿದ್ದ ಕ್ಯಾಸಿ ಕ್ವಾರ್ಟೆಂಗ್‌ರನ್ನು ಹುದ್ದೆಯಿಂದ ತೆಗೆದುಹಾಕಿದ್ದಕ್ಕೆ ಸಂಸದರು ಟ್ರಸ್‌ ವಿರುದ್ಧ ಕಿಡಿಕಾರಿದ್ದಾರೆ. ಆರ್ಥಿಕತೆಯನ್ನು ಸರಿ ಮಾಡುವ ನಿಟ್ಟಿನಲ್ಲಿ ಟ್ರಸ್‌ ಕೈಗೊಳ್ಳುತ್ತಿರುವ ನಿರ್ಧಾರಗಳಿಗೆ ಪಕ್ಷದಲ್ಲೇ ಟೀಕೆ ವ್ಯಕ್ತವಾಗುತ್ತಿದೆ.
ಟ್ರಸ್‌ ವಿರುದ್ಧ ಟೋರಿ ಬಂಡುಕೋರರು ಪರಿಗಣಿಸುತ್ತಿರುವ ಸಾಧ್ಯತೆಗಳ ಪೈಕಿ ಒಂದು, ಸುನಾಕ್ ಜತೆಗೆ ಸಂಸತ್ತಿನ ಸದಸ್ಯರು ಒಂದಾಗುವಂತೆ ಮಾಡುವ ಮೂಲಕ ಪಕ್ಷದೊಳಗೆ ಅವಿರೋಧ ಅಭ್ಯರ್ಥಿಯನ್ನು ಪಕಟ್ಟಕ್ಕೇರಿಸುವ ಮೂಲಕ ನಾಯಕತ್ವದ ಚುನಾವಣೆಯನ್ನು ತಪ್ಪಿಸುವುದಾಗಿದೆ. ಒಂದು ವೇಳೆ ಟ್ರಸ್ ಕೆಳಗಿಳಿಯಲು ಮನವರಿಕೆ ಸಾಧ್ಯವಾದರೆ, ಜಾನ್ಸನ್ ಪುನರಾಗಮನ ಅಥವಾ ಸುನಾಕ್‌ ಪ್ರಧಾನಿ ಹುದ್ದೆಗೇರುವ ಸಾಧ್ಯತೆಗಳು ತರೆದುಕೊಳ್ಳಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!