ದೀಪಾವಳಿ ಹಬ್ಬಕ್ಕೆ ಸಿಬ್ಬಂದಿಗೆ ಭರ್ಜರಿ ಗಿಫ್ಟ್, ಕಾರು, ಬೈಕ್ ಉಡುಗೊರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಆಫೀಸ್‌ಗಳಲ್ಲಿ ದೀಪಾವಳಿ ಹಬ್ಬಕ್ಕೆ ಏನಾದರೂ ಉಡುಗೊರೆ ನೀಡೋದು ಸಾಮಾನ್ಯ. ಚೆನ್ನೈನಲ್ಲಿ ಉದ್ಯಮಿಯೊಬ್ಬರು ತಮ್ಮ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ್ದಾರೆ.

ಉದ್ಯಮಿ ತನ್ನ ಉದ್ಯೋಗಿಗಳಿಗೆ ಕಾರು ಹಾಗೂ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ. ಇದರ ಒಟ್ಟು ಮೊತ್ತ 1.2 ಕೋಟಿ ರೂ. ಆಗಿದೆ. ಚೆನ್ನೈನ ಚಲನಿ ಜ್ಯುವೆಲರಿ ಮಾಲೀಕ ಜಯಂತಿ ಲಾಲ್ ಚಯಂತಿ ತಮ್ಮ ಸಿಬ್ಬಂದಿಗಳಿಗೆ ಒಟ್ಟಾರೆ 8 ಕಾರು ಹಾಗೂ 18 ಬೈಕ್‌ಗಳನ್ನು ನೀಡಿದ್ದಾರೆ.

ಉದ್ಯೋಗಿಗಳಿಗೆ ಈ ಉಡುಗೊರೆ ಆಶ್ಚರ್ಯ ಜೊತೆಗೆ ಸಂತಸ ತಂದಿದೆ. ಕುಟುಂಬದಂತೆ ಅವರನ್ನು ಕಂಡಿರುವ ಮಾಲೀಕ, ಇವರೆಲ್ಲರೂ ನನ್ನ ಕುಟುಂಬದಂತೆ, ಕಂಪನಿ ಏಳಿಗೆಗೆ ಇವರು ನಮ್ಮಂತೆಯೇ ದುಡಿದಿದ್ದಾರೆ. ನಮಗೆ ಲಾಭ ತಂದಿದ್ದಾರೆ. ನಮಗೆ ಲಾಭ ಇದೆ, ಅವರಿಗೂ ಪ್ರೋತ್ಸಾಹದ ಅವಶ್ಯಕತೆ ಇದೆ. ಹಾಗಾಗಿ ಈ ಉಡುಗೊರೆ ನೀಡಿದ್ದೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!