ವೃದ್ಧೆಯ ಹೆಸರಲ್ಲಿ ಬೂತ್ ಏಜೆಂಟ್ ಮತದಾನ: ಕಾಸರಗೋಡಿನಲ್ಲಿ ನಾಲ್ವರು ಮತಗಟ್ಟೆ ಅಧಿಕಾರಿಗಳು ವಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಸರಗೋಡು ಜಿಲ್ಲೆಯ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಕಲ್ಯಾಶ್ಯೇರಿಯಲ್ಲಿ ಮನೆಯಿಂದ ಮತದಾನ ವೇಳೆ ನಕಲಿ ಮತದಾನ ನಡೆಸಿರುವ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ನಾಲ್ವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

92 ರ ಹರೆಯದ ವೃದ್ಧೆಯೋರ್ವರು ಮಾಡಬೇಕಿದ್ದ ಮತದಾನದ ಬದಲಿಗೆ ಸಿಪಿಎಂನ ಬೂತ್ ಏಜೆಂಟ್ ಒಬ್ಬರು ಮತದಾನ ಮಾಡಿರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳು ಬಹಿರಂಗಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಕಣ್ಣೂರು ಜಿಲ್ಲಾ ಚುನಾವಾಣಾಧಿಕಾರಿ ಅರುಣ್ ಕೆ. ವಿಜಯನ್ ಆದೇಶ ನೀಡಿದ್ದಾರೆ.

ಜೊತೆಗೆ ಈ ಬಗ್ಗೆ ತನಿಖೆಗೆ ಕ್ರಮ ಕೈಗೊಳ್ಳಲಾಗಿದ್ದು, ಇಲಾಖಾ ಮಟ್ಟದ ಕ್ರಮಕ್ಕೆ ಕೂಡಾ ಶಿಫಾರಸು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!