ಯಾವ್‌ ಶಿಕ್ಷೆನೂ ಸಾಕಾಗಲ್ಲ, ಜನರ ಕೈಗೆ ಆರೋಪಿ ಫಯಾಜ್‌ನನ್ನು ಒಪ್ಪಿಸಿನೋಡಿ ಎಂದ ರಚಿತಾ ರಾಮ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಳಿ ಬದುಕಬೇಕಿದ್ದ, ತಂದೆ ತಾಯಿಯ ಮುದ್ದಿನ ಕಣ್ಮಣಿ ನೇಹಾ ಹಿರೇಮಠ್‌ ಮಣ್ಣಲ್ಲಿ ಮಣ್ಣಾಗಿದ್ದಾಳೆ, ತನ್ನದೇ ಪರಿಚಯ ಇರುವ ಯುವಕನಿಂದ ಬರ್ಬರವಾಗಿ ಕೊಲೆಯಾಗಿದ್ದಾಳೆ…

ರಾಜ್ಯಾದ್ಯಂತ ನೇಹಾ ಸಾವಿಗೆ ಆಕ್ರೋಶ ವ್ಯಕ್ತವಾಗಿದ್ದು, ನಟಿ ರಚಿತಾ ರಾಮ್‌ ಕೂಡ ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ನೀಡಿ ಎಂದು ಹೇಳಿದ್ದಾರೆ.

ಜಾತಿ, ಧರ್ಮ ಯಾವುದೇ ಆಗಿರಲಿ ಮೊದಲು ನಾವು ಮಾನವರು. ನಾನು ಈ ಪೋಸ್ಟ್​ ಹಾಕಲು ಕಾರಣ ಆಕೆಗೆ ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ. ಸರ್ಕಾರಕ್ಕೆ ನನ್ನ ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ #Wewantjustice ಎಂದು ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

 

View this post on Instagram

 

A post shared by Rachitaa Ram (@rachita_instaofficial)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!