ಗಡಿ ವಿವಾದ: ತೀವ್ರ ಪ್ರತಿಭಟನೆಗಳ ನಂತರ ಸಹಜ ಸ್ಥಿತಿಯತ್ತ ಬೆಳಗಾವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ-ಮಹಾರಾಷ್ಟ್ರ ರಾಜ್ಯ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳ ಹೋರಾಟಗಾರರು ಬೃಹತ್ ಪ್ರತಿಭಟನೆ ನಡೆಸಿದ್ದರು.
ಬಸ್‌ಗಳಿಗೆ ಕಲ್ಲು ತೂರಾಟ, ಮಸಿ ಬಳಿಯುವುದು, ಸಂಚಾರಕ್ಕೆ ಅಡ್ಡಿಪಡಿಸುವುದರ ಮೂಲಕ ಆಕ್ರೋಶ ಹೊರಹಾಕಿದ್ದರು. ಇದೀಗ ಒಂದು ದಿನದ ನಂತರ ಬೆಳಗಾವಿ ಶಾತ ಸ್ಥಿತಿಯತ್ತ ಮರಳಿದೆ.

ಉಭಯ ರಾಜ್ಯಗಳ ಗಡಿ ವಿವಾದ ತಾರಕಕ್ಕೇರಿದ್ದು, ಪ್ರತಿಭಟನೆಗಳು ತೀವ್ರಗೊಂಡಿತ್ತು. ಹಾಗಾಗಿ ಎರಡೂ ರಾಜ್ಯಗಳು ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದವು. ಇದೀಗ ಸಹಜ ಸ್ಥಿತಿಯತ್ತ ಬೆಳಗಾವಿ ಮರಳಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!