ಹೊಸದಿಗಂತ ಡಿಜಿಟಲ್ ಡೆಸ್ಕ್
ಕಳೆದ ವರ್ಷ ಜೈಲಿನಿಂದ ಬಿಡುಗಡೆಯಾದ ಮುಸ್ಲಿಂ ಉಗ್ರಗಾಮಿಯೊಬ್ಬ ಇಂಡೋನೇಷ್ಯಾದ ಮುಖ್ಯ ದ್ವೀಪವಾದ ಜಾವಾದಲ್ಲಿನ ಪೊಲೀಸ್ ಠಾಣೆಯಲ್ಲಿ ಬುಧವಾರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಒಬ್ಬ ಅಧಿಕಾರಿ ಸಾವನ್ನಪ್ಪಿ 11 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಕೋರನು ತನ್ನ ಬೈಕ್ ನೊಂದಿಗೆ ಅಸ್ತಾನಾ ಅನ್ಯಾರ್ ಪೊಲೀಸ್ ಠಾಣೆಗೆ ಪ್ರವೇಶಿಸಿದ್ದ. ಬೆಳಿಗ್ಗಿನ ಮಾರ್ಚ್ ಗಾಗಿ ಪೊಲೀಸರು ಸಾಲುಗಟ್ಟಿ ನಿಂತಿದ್ದಾಗ ತನ್ನ ಬಳಿಯಿದ್ದ ಎರಡು ಬಾಂಬ್‌ಗಳಲ್ಲಿ ಒಂದನ್ನು ಸ್ಫೋಟಿಸಿಕೊಂಡಿದ್ದಾನೆ ಎಂದು ಬಂಡಂಗ್ ನಗರ ಪೊಲೀಸ್ ಮುಖ್ಯಸ್ಥ ಅಸ್ವಿನ್ ಸಿಪಾಯುಂಗ್ ಹೇಳಿದ್ದಾರೆ. ಇನ್ನೊಂದು ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವೀಡಿಯೊವು ಪೊಲೀಸ್ ಠಾಣೆಯ ಹಾನಿಗೊಳಗಾದ ಲಾಬಿ ಬಳಿ ದೇಹದ ಭಾಗಗಳನ್ನು ತೋರಿಸಿದೆ, ಸ್ಫೋಟದ ಸದ್ದು ಕೇಳಿ ಜನರು ಕಟ್ಟಡದಿಂದ ಹೊರಗೆ ಓಡಿಹೋದಾಗ ಬಿಳಿ ಹೊಗೆ ಆವರಿಸಿದ್ದನ್ನು ಕಾಣಬಹುದು. ದಾಳಿಗೆ ಸಿಲುಕಿದ ಪೋಲೀಸ್ ಅಧಿಕಾರಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಾಣಬಹುದು. ಇತರ ಇಬ್ಬರು ಅಧಿಕಾರಿಗಳು ಬೈಕ್ ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ನಂತರ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಹತ್ತು ಮಂದಿ ಹಾಗೂ ಓರ್ವ ನಾಗರಿಕ ಗಾಯಗೊಂಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ